• Home  
  • ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದಲ್ಲಿ ವಾರ್ಷಿಕ ರಥೋತ್ಸವ, ಮಹಾ ಅನ್ನ ಸಂತರ್ಪಣೆ (Annual Chariot Festival, Maha Anna Santarpana at Uchchila Sri Mahalakshmi Temple)
- ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದಲ್ಲಿ ವಾರ್ಷಿಕ ರಥೋತ್ಸವ, ಮಹಾ ಅನ್ನ ಸಂತರ್ಪಣೆ (Annual Chariot Festival, Maha Anna Santarpana at Uchchila Sri Mahalakshmi Temple)

Share: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದಲ್ಲಿ ವಾರ್ಷಿಕ ರಥೋತ್ಸವ, ಮಹಾ ಅನ್ನ ಸಂತರ್ಪಣೆ ಧಾರ್ಮಿಕ ವಿಧಿ ವಿಧಾನ ಪೂರೈಸಿದ ವೇ.ಮೂ. ರಾಘವೇಂದ್ರ ತಂತ್ರಿ, ವೇ.ಮೂ. ರಾಘವೇಂದ್ರ ಉಪಾಧ್ಯಾಯ (ಚಿತ್ರ ಕೃಪೆ: ಸಚಿನ್‌ ಉಚ್ಚಿಲ) (Uchila) ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಮಹಾ ಅನ್ನ ಸಂತ್ರಪಣೆ ಶುಕ್ರವಾರ ನೆರವೇರಿತು.   ದೇವಳದ ತಂತ್ರಿವರ್ಯರಾದ ವೇದಮೂರ್ತಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ವೇದ […]

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದಲ್ಲಿ ವಾರ್ಷಿಕ ರಥೋತ್ಸವ, ಮಹಾ ಅನ್ನ ಸಂತರ್ಪಣೆ

ಧಾರ್ಮಿಕ ವಿಧಿ ವಿಧಾನ ಪೂರೈಸಿದ ವೇ.ಮೂ. ರಾಘವೇಂದ್ರ ತಂತ್ರಿ, ವೇ.ಮೂ. ರಾಘವೇಂದ್ರ ಉಪಾಧ್ಯಾಯ

(ಚಿತ್ರ ಕೃಪೆ: ಸಚಿನ್‌ ಉಚ್ಚಿಲ)

(Uchila) ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಮಹಾ ಅನ್ನ ಸಂತ್ರಪಣೆ ಶುಕ್ರವಾರ ನೆರವೇರಿತು.

  ದೇವಳದ ತಂತ್ರಿವರ್ಯರಾದ ವೇದಮೂರ್ತಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ವೇದ ಮೂತ್ರಿ ರಾಘವೇಂದ್ರ ಉಪಾಧ್ಯಾಯರವರು ಧಾರ್ಮಿಕ ವಿಧಿ ವಿಧಾನ ಪೂರೈಸಿದರು.

   ಈ ಸಂದರ್ಭ ಮೊಗವೀರ ಮುಂದಾಳು ನಾಡೋಜಾ ಡಾ. ಜಿ ಶಂಕರ್‌, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ದ.ಕ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾಶರತ್, ಕಾರ್ಯದರ್ಶಿ ಪೂರ್ಣಿಮಾ ಚಂದ್ರಶೇಖರ್, ಬೆಳ್ಳಿ ರಥ ಸಮಿತಿಯ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಶುಭಾ ದಿನೇಶ್,  ಸಮಿತಿಯವರಾದ ವಿನಯ ಕರ್ಕೇರಾ, ಮೋಹನ ಬೇಂಗ್ರೆ, ನಾರಾಯಣ ಕರ್ಕೇರಾ, ಸಂಜೀವ ಬಂಗೇರ, ಮೋಹನ್ ಬಂಗೇರ, ಕಾಪು ನಾಲ್ಕು ಪಟ್ಣ ಅಧ್ಯಕ್ಷ ಮನೋಜ್ ಕಾಂಚನ್, ವಾಸುದೇವ ಸಾಲ್ಯಾನ್, ಸುಜಿತ್ ‌ಸಾಲ್ಯಾನ್, ನಿಶಾನ್ ಕುಂದರ್ ಏರ್ಮಾಳು, ಅಶೋಕ್ ಸಾಲ್ಯಾನ್ ಪಡುಬಿದ್ರಿ, ಸರ್ವೋತ್ತಮ ಕುಂದರ್, ಗುಂಡು ಬಿ ಅಮೀನ್‌, ಸುಜಿತ್ ‌ಸಾಲ್ಯಾನ್, ದಿನೇಶ್ ಎರ್ಮಾಳು, ಸತೀಶ್ ಸಾಲ್ಯಾನ್ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.