ಉಡುಪಿ – ಉಚ್ಚಿಲ ದಸರಾ 2025 : ‘ಪೊಣ್ಣುಪಿಲಿ ನಲಿಕೆ 2025’ ಉದ್ಘಾಟನೆ
ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರವರಿಂದ ಉದ್ಘಾಟನೆ
(Uchila) ಉಚ್ಚಿಲ : ಮೊಗವೀರ ಮಹಾಜನ ಸಂಘ ಉಚ್ಚಿಲ ಸಂಚಾಲಿತಉಡುಪಿ – ಉಚ್ಚಿಲ ದಸರಾ 2025 ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ವತಿಯಿಂದ ಅಧ್ಯಕ್ಷ ಯಶ್ಪಾಲ್ ಸುವರ್ಣ ನೇತೃತ್ವದ ಮೂರನೇ ವರ್ಷದ ಪೊಣ್ಣು ಪಿಲಿ ನಲಿಕೆ 2025 ನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಶ್ಯಾಮಿಲಿ ಜಿ ಶಂಕರ್ ಸಭಾಂಗಣದಲ್ಲಿ ಶನಿವಾರ ಸಂಜೆ ಉದ್ಘಾಟಿಸಿದರು.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹಿರಿಯರ ಧಾರ್ಮಿಕ ನಂಬಿಕೆಗಳು ಮಕ್ಕಳಿಗೆ ಸಂಸ್ಕೃತಿಯ ಒಲವು ಮಹಿಳೆಯರಿಂದ ಉಳಿಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದರು.
ಭರತನಾಟ್ಯದಲ್ಲಿ ಗಿನ್ನೆಸ್ ದಾಖಲೆ ಮಾಡಿದ ವಿದುಷಿ ದೀಕ್ಷಾ ಮಾತನಾಡಿ, ಮಹಿಳೆಯರಿಗೂ ಶಕ್ತಿಯಿದೆ. ಅದನ್ನು ನಂಬಿಕೆಯೊಂದಿಗೆ ಸಾಧಿಸಬೇಕು ಎಂದರು.
ಈ ಸಂದರ್ಭ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಶ್ಯಾಮಿಲಿ ನವೀನ್, ಅಜಿತ್ ಕೊಡವೂರು, ಶಿಲ್ಪಾ ಜಿ ಸುವರ್ಣ, ನಿರುಪಮ ಪ್ರಸಾದ್ ಶೆಟ್ಟಿ, ಸಂಧ್ಯಾ ದೀಪ, ಶಶಿಕಾಂತ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.
