ರೌಡಿಶೀಟರ್ ,ಎಕೆಎಂಎಸ್ ಬಸ್ ಗಳ ಮಾಲಕ ಸೈಫುದ್ದೀನ್ ಕೊಲೆ
(Udupi)ಉಡುಪಿ : ರೌಡಿಶೀಟರ್, ಎಕೆಎಂಎಸ್ ಬಸ್ ಗಳ ಮಾಲಕ ಸೈಫುದ್ದೀನ್ ಇವರ ಕೊಲೆ ಮಲ್ಪೆ ಠಾಣೆ ವ್ಯಾಪ್ತಿಯ ಕೊಡವೂರು ಬಳಿ ಇಂದು ನಡೆದಿದೆ.
ಕೊಡವೂರಿನ ಮನೆಯ ಒಳಗೆ ನುಗ್ಗಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಖಾಸಗಿ ಬಸ್ ಮಾಲಕನಾಗಿದ್ದ ಸೈಫುದ್ದೀನ್, ಮಣಿಪಾಲ ಸಮೀಪದ ಆತ್ರಾಡಿಯ ನಿವಾಸಿಯಾಗಿದ್ದಾರೆ.
ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

