ಉಡುಪಿ ಎಂಜಿಎಂ ಕಾಲೇಜಿನಲ್ಲಿ ಉಭಯ ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರ ಗುರುತಿಸುವಿಕೆ, ಸನ್ಮಾನ
ಆಂಬ್ಯುಲೆನ್ಸ್ ಚಾಲಕರೊಂದಿಗೆ ವಿದ್ಯಾರ್ಥಿಗಳ ಸಂವಾದ
(Udupi) ಉಡುಪಿ: ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಡುಪಿ ಹಾಗೂ ದ.ಕ. ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರ ಗುರುತಿಸುವಿಕೆ, ಗೌರವಾರ್ಪಣೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತ ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆಂಬ್ಯುಲೆನ್ಸ್ ಚಾಲಕರ ಬದ್ಧತೆ, ಸೇವೆಯನ್ನು ಶ್ಲಾಘಿಸಿದರು.
ಉಪ ಪ್ರಾಂಶುಪಾಲ ಡಾ. ಎಂ. ವಿಶ್ವನಾಥ್ ಪೈ ಅತಿಥಿಯಾಗಿ ಭಾಗವಹಿಸಿ, ಆಂಬ್ಯುಲೆನ್ಸ್ ಚಾಲಕರು ಜೀವರಕ್ಷಕರು, ಅವರ ಸೇವೆಯಲ್ಲಿ ನಮ್ಮ ಸಹಕಾರ ನೀಡಬೇಕು ಎಂದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಚಿತ್ ಕೋಟ್ಯಾನ್ ಸ್ವಾಗತಿಸಿದರು.
ಅಧಿಕಾರಿ ಡಾ. ರೇಖಾ ಎನ್. ಚಂದ್ರ, ಎನ್ಎಸ್ಎಸ್ ನಾಯಕರಾದ ಧೃತಿ ಕೆ.ಎನ್., ರಂಜಿತ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಉಷಾ ಭಟ್ ವಂದಿಸಿದರು. ತನ್ಮಯಿ ಚಾತ್ರ ನಿರೂಪಿಸಿದರು.
ಸುಮಾರು 18 ಆಂಬ್ಯುಲೆನ್ಸ್ ಚಾಲಕರನ್ನು ಗುರುತಿಸಿ, ಅಭಿನಂದಿಸಲಾಯಿತು.
ಹಿರಿಯ ಆಂಬ್ಯುಲೆನ್ಸ್ ಚಾಲಕರಾದ ಈಶ್ವರ್ ಮಲ್ಪೆ, ನಿತ್ಯಾನಂದ ಒಳಕಾಡು, ಮಂಗಳೂರು ಶ್ರೀಗಣೇಶ್ ಅಂಬ್ಯುಲೆನ್ಸ್ನ ಪ್ರಸಾದ್ ಹಾಗೂ ಇನ್ನಿತರರು ಸಂವಾದದಲ್ಲಿ ಉಪಸ್ಥಿತರಿದ್ದರು.

