ಬೆಳ್ಮಣ್ : ಕುಂಭ ನಿಧಿ ಕ್ರೆಡಿಟ್ ಕೋ–ಸೊಸೈಟಿಯ ಒಕ್ಕೂಟದ ಉದ್ಘಾಟನೆ, ಶ್ರೀ ಲಕ್ಷ್ಮೀ ಪೂಜೆ
ಕಾರ್ಯಕ್ರಮ ಉದ್ಘಾಟಿಸಿದ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ
(Belman) ಬೆಳ್ಮಣ್ : ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನೆ ಕುಲಾಲ ಭವನ ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರಿನಲ್ಲಿ ಜರಗಿತು.
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅವರು ತಮ್ಮ ಆಶೀರ್ವಚನದಲ್ಲಿ ಜಾತಿ, ಭೇದಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಬೇಕು. ಬೇರೆ ಸಮುದಾಯಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಮತ್ತು ದೇವಸ್ಥಾನಕ್ಕೆ ಹೋಗುವುದರಿಂದ ಮಾತ್ರ ಶುದ್ದತೆ ಬರುವುದಿಲ್ಲ. ಮೊದಲು ಮನಸ್ಸನ್ನು ಶುದ್ಧವಾಗಿವಂತೆ ಹೇಳಿದರು.
ಸೊಸೈಟಿ ಅಧ್ಯಕ್ಷ ಕುಶ ಆರ್ ಮೂಲ್ಯ ಇನ್ನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ , ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಸೂರಜ್ ಹಿಲ್ಸ್ ಮಾಲಕ ಶೋಧನ ಕುಮಾರ್ ಶೆಟ್ಟಿ, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೋರಿಬೆಟ್ಟುಗುತ್ತು, ಸೊಸೈಟಿಯ ಉಪಾಧ್ಯಕ್ಷ ಜಗನ್ನಾಥ ಕುಲಾಲ್, ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಕುಲಾಲ ಸಂಘ ನಾನಿಲ್ತರ್ ಅಧ್ಯಕ್ಷ ಜಯರಾಮ್ ಕುಲಾಲ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಕುಲಾಲ ಸಂಘ ಬೋಳ ಅಧ್ಯಕ್ಷ ಗಣೇಶ್ ಕುಲಾಲ್, ವಿಠಲ ಮೂಲ್ಯ ಬೇಲಾಡಿ ಸ್ವಸಹಾಯ ಸಂಘದ ಒಕ್ಕೂಟ ಅಧ್ಯಕ್ಷೆ ಉಷಾ ಸುರೇಂದ್ರ ಕುಲಾಲ್ , ಪವಿತ್ರ ಗಿರೀಶ್, ಚಂದ್ರಾವತಿ ಇನ್ನಾ ಉಪಸ್ಥಿತರಿದ್ದರು.
ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬ್ರಿಜೆಶ್ ಕುಲಾಲ್ ಧನ್ಯವಾದವಿತ್ತರು.

