• Home  
  • ಉಡುಪಿ ಗ್ರಾಮೀಣ ಬಂಟರ ಸಂಘದ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿ ಶಿಬಿರ (Free computer literacy training camp organized by Udupi Grameen Bantara Sangha Trust)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಉಡುಪಿ ಗ್ರಾಮೀಣ ಬಂಟರ ಸಂಘದ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿ ಶಿಬಿರ (Free computer literacy training camp organized by Udupi Grameen Bantara Sangha Trust)

Share: ಉಡುಪಿ ಗ್ರಾಮೀಣ ಬಂಟರ ಸಂಘದ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷ  ಅಶೋಕ ಕುಮಾರ್ ಶೆಟ್ಟಿ‌ (Kunthala Nagara) ಕುಂತಳನಗರ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಂಘದ ಮಾಜಿ ಅಧ್ಯಕ್ಷರಾದ ಉದ್ಯಮಿ ದಿ. ಸಖಾರಾಮ ಶೆಟ್ಟಿ ಸವಿ ನೆನಪಿನಲ್ಲಿ 1 ತಿಂಗಳು ನಡೆಯಲಿರುವ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಗೆ ಚಾಲನೆಯನ್ನು ಶುಕ್ರವಾರ ಬೆಳಿಗ್ಗೆ ಬಹ್ರೈನ್ ಔಮಾ ಮಿಡ್ಲ್ ಈಸ್ಟ್ ಇದರ ಮುಖ್ಯಸ್ಥ […]

(Kunthala Nagara) ಕುಂತಳನಗರ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಂಘದ ಮಾಜಿ ಅಧ್ಯಕ್ಷರಾದ ಉದ್ಯಮಿ ದಿ. ಸಖಾರಾಮ ಶೆಟ್ಟಿ ಸವಿ ನೆನಪಿನಲ್ಲಿ 1 ತಿಂಗಳು ನಡೆಯಲಿರುವ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಗೆ ಚಾಲನೆಯನ್ನು ಶುಕ್ರವಾರ ಬೆಳಿಗ್ಗೆ ಬಹ್ರೈನ್ ಔಮಾ ಮಿಡ್ಲ್ ಈಸ್ಟ್ ಇದರ ಮುಖ್ಯಸ್ಥ ನವೀನ್ ಶೆಟ್ಟಿ ಉದ್ಘಾಟಿಸಿದರು.

 ಅವರು ಮಾತನಾಡಿ, ಗ್ರಾಮೀಣ ಭಾಗದ ಮಹಿಳಾ ಸಬಲೀಕರಣ, ಸಮಾಜದ ಅಭ್ಯುದಯಕ್ಕೆ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಕಾರಣವಾಗಿದೆ. ಸ್ಪರ್ಧಾತ್ಮಕ  ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಲಭ್ಯ ಉಚಿತ ತರಬೇತಿಯ ಅವಕಾಶವನ್ನು ಉಪಯೋಗಿಸಿ ಕೊಳ್ಳಿ. ಕಳೆದ ಸಮಯ ಮತ್ತೆ ಬರುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಅಶೋಕ ಕುಮಾರ್ ಶೆಟ್ಟಿ ವಹಿಸಿದ್ದರು.

ಅವರು ಮಾತನಾಡಿ, 3 ವರ್ಷಗಳಲ್ಲಿ 400 ಅಬ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ, 1700 ಮಂದಿಗೆ ಉಚಿತ ಉದ್ಯಮ ಶೀಲತೆ, ಕೌಶಲ್ಯಾಭಿವೃದ್ಧಿ ತರಬೇತಿ, ೪ ಬಾರಿ ಉಚಿತವಾಗಿ ನಡೆದ ಉದ್ಯೋಗ ಮೇಳದಲ್ಲಿ 3500ಕ್ಕೂ ಅಧಿಕ ಮಂದಿಗೆ ಉದ್ಯೋಗದ ಅವಕಾಶ ಲಭ್ಯವಾಗಿದೆ ಎಂದರು.

   ದೆಂದೂರುಕಟ್ಟೆ ಭಾರತಿ ಸಾಫ್ಟ್ ವೇರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಕಿರಣ್ ನಾಯಕ್‌, ವಿದ್ಯಾರ್ಥಿಗಳು ಜೀವನದ ಗುರಿ ಇರಿಸಿ ಮುಂದೆ ಸಾಗಿರಿ ಎಂದರು.

  ವೇದಿಕೆಯಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷರಾದ ಡಾ. ಎಚ್.ಬಿ. ಶೆಟ್ಟಿ, ಮೈಸ್ ಪ್ರಭಾರ ಪ್ರಾಂಶುಪಾಲ ರವಿ ಕೋಟ್ಯಾನ್, ಟ್ರಸ್ಟಿಗಳಾದ ರಂಜಿನಿ ಹೆಗ್ಡೆ, ಪದ್ಮನಾಭ ಹೆಗ್ಡೆ, ಗೋಪಾಲ ಶೆಟ್ಟಿ, ದಯಾನಂದ ಶೆಟ್ಟಿ, ರಮೇಶ್ ಶೆಟ್ಟಿ ನಿಂಜೂರು, ಹರೀಂದ್ರ ಹೆಗ್ಡೆ, ಭಾಸ್ಕರ ಶೆಟ್ಟಿ, ಯತಿರಾಜ್, ಗಿರೀಶ್ ಇದ್ದರು.

 ಟ್ರಸ್ಟ್ ನ ಅಧ್ಯಕ್ಷ ಅಶೋಕ್‌ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್‌ ಕೋಶಾಧಿಕಾರಿ ವಿಜಿತ್ ಶೆಟ್ಟಿ ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.