ಉದ್ಯಮಿ ಸಖಾರಾಮ ಶೆಟ್ಟಿ ಅವರಿಗೆ ನುಡಿ ನಮನ
ಕುಂತಳನಗರ ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಶನ್ ಸೆಂಟರ್ ಸಭಾಭವನದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮ
(Kunthala Nagara) ಕುಂತಳನಗರ: ಉಡುಪಿ ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಉದ್ಯಮಿ ಸಖಾರಾಮ ಶೆಟ್ಟಿ ಅವರ ಗೌರವಾರ್ಥ ನುಡಿನಮನ ಕಾರ‍್ಯಕ್ರಮವು ಹಾಲಿ ಅಧ್ಯಕ್ಷ ಡಾ. ಎಚ್.ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಶನ್ ಸೆಂಟರ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಉಡುಪಿ ಗ್ರಾಮೀಣ ಬಂಟರ ಸಂಘದ ಕಟ್ಟಡ ನಿರ್ಮಾಣ ಸಹಿತ ಸಮಗ್ರ ಅಭ್ಯುದಯಕ್ಕೆ ತೊಡಗಿಸಿಕೊಂಡಿದ್ದ ಸಖಾರಾಮ ಶೆಟ್ಟಿ ಅವರ ನಾಯಕತ್ವದ ಗುಣದಿಂದ ಊರಿನ ಅಭಿವೃದ್ಧಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, ಗ್ರಾಮೀಣ, ಪಟ್ಟಣ-ನಗರ ವ್ಯಾಪ್ತಿಯಲ್ಲಿ ಯಶಸ್ವಿ ಉದ್ಯಮಿಯಾಗಿ ಉದ್ಯೋಗದಾತರಾಗಿದ್ದರು ಎಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ, ಸಂಘದ ಕೋಶಾಧಿಕಾರಿ ವಿಜಿತ್ ಶೆಟ್ಟಿ, ಪ್ರಮುಖರಾದ ದಯಾನಂದ ಶೆಟ್ಟಿ ಕಲ್ಮಂಜೆ, ಗೋಪಾಲ ಶೆಟ್ಟಿ, ನುಡಿನಮನ ಸಲ್ಲಿಸಿ ಪುಷ್ಪಾಂಜಲಿ ಸಲ್ಲಿಸಿದರು.
ಈ ಸಂದರ್ಭ ಬಹ್ರೈನ್ ಔಮಾ ಮಿಡ್ಲ್ ಈಸ್ಟ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ನವೀನ್ ಶೆಟ್ಟಿ, ದೆಂದೂರುಕಟ್ಟೆ ಭಾರತಿ ಸಾಫ್ಟ್ ವೇರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಕಿರಣ್ ನಾಯಕ್, ಪ್ರಮುಖರಾದ ರಂಜಿನಿ ಹೆಗ್ಡೆ, ಪದ್ಮನಾಭ ಹೆಗ್ಡೆ, ಗೋಪಾಲ ಶೆಟ್ಟಿ, ದಯಾನಂದ ಶೆಟ್ಟಿ, ರಮೇಶ್ ಶೆಟ್ಟಿ ನಿಂಜೂರು, ಹರೀಂದ್ರ ಹೆಗ್ಡೆ, ಭಾಸ್ಕರ ಶೆಟ್ಟಿ, ಯತಿರಾಜ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

