ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಚಿತ ವಾಕರ್, ವೀಲ್ ಚೇರ್ ಹಸ್ತಾಂತರ
(Udupi) ಉಡುಪಿ: ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈಯವರು ರೋಗಿಗಳಿಗೆ ಅಗತ್ಯವಿರುವ ವೀಲ್ ಚೇರ್ ಮತ್ತು ವಾಕರ್ ಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ಆಚಾರ್ಯ ಹಾಗೂ ಜಿಲ್ಲಾ ಆಯುಷ್ ಆಫೀಸರ್, ಡಾ. ದಿನಕರ ಡೊಂಗ್ರೆ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್. ಪಿ, ಗೌರವ ಕಾರ್ಯದರ್ಶಿಯಾದ ಜನಾರ್ದನ ಕೊಡವೂರು, ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಕತೆ ಕೇಳೋಣ ಸಂಚಾಲಕ ಸತೀಶ್ ಕೊಡವೂರು, ಕಲಾವಿದೆ ಪದ್ಮಾಸಿನಿ ಉದ್ಯಾವರ, ಪ್ರಜ್ಞಾ ಕೊಡವೂರು, ಉಮೇಶ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.

