• Home  
  • ಉಡುಪಿ- ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ’ ಉದ್ಘಾಟನೆ (Udupi- ‘Massive Swadeshi Festival’ inaugurated in Doddanagudde)
- fastival

ಉಡುಪಿ- ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ’ ಉದ್ಘಾಟನೆ (Udupi- ‘Massive Swadeshi Festival’ inaugurated in Doddanagudde)

Share: ಉಡುಪಿ– ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ‘ ಉದ್ಘಾಟನೆ ಹಬ್ಬ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ (Udupi) ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ಸಂಭ್ರಮಾಚರಣೆಗಾಗಿ ಹಮ್ಮಿಕೊಂಡಿರುವ  ‘ಬೃಹತ್ ಸ್ವದೇಶಿ ಹಬ್ಬ’ ವನ್ನು (ಕೃಷಿ – ಕೌಶಲ – ಗುಡಿ ಕೈಗಾರಿಕೆ – ಆಹಾರ – ಸಸ್ಯೋತ್ಸವ)   ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈತ ಸೇವಾ ಕೇಂದ್ರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಉದ್ಘಾಟಿಸಿದರು.     ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಆತ್ಮನಿರ್ಭರ ಭಾರತ […]

(Udupi) ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ಸಂಭ್ರಮಾಚರಣೆಗಾಗಿ ಹಮ್ಮಿಕೊಂಡಿರುವ  ‘ಬೃಹತ್ ಸ್ವದೇಶಿ ಹಬ್ಬ’ ವನ್ನು (ಕೃಷಿ – ಕೌಶಲ – ಗುಡಿ ಕೈಗಾರಿಕೆ – ಆಹಾರ – ಸಸ್ಯೋತ್ಸವ)   ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈತ ಸೇವಾ ಕೇಂದ್ರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಉದ್ಘಾಟಿಸಿದರು.

    ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಆತ್ಮನಿರ್ಭರ ಭಾರತ ಜನ-ಜಾಗೃತಿ ಪಾದಯಾತ್ರೆ ದೊಡ್ಡಣಗುಡ್ಡೆ ನೇಕಾರರ ಕಾಲೋನಿಯಿಂದ ರೈತ ಸೇವಾ ಕೇಂದ್ರದ ವರೆಗೆ ನಡೆಯಿತು.

    ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಚರಕದಲ್ಲಿ ನೂಲು ಸುತ್ತುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುತ್ಯಾರು ನವೀನ್ ಶೆಟ್ಟಿ ಸೈಕಲ್ ಬ್ರಾಂಡ್ ಪ್ರಾಯೋಜಕತ್ವದ 24 ಗಂಟೆ ಉರಿಯುವ  ಆರು ಅಡಿಯ ಅಗರಬತ್ತಿಯನ್ನು ಬೆಳಗಿಸಿ ಶುಭ ಕೋರಿದರು.

    ”ನಾನು ಆದ್ಯತೆಯಲ್ಲಿ ಸ್ವದೇಶಿ ವಸ್ತುಗಳನ್ನು ಉಪಯೋಗಿಸುತ್ತೇನೆ”ಎಂಬ ಶೀರ್ಷಿಕೆ ಅಡಿಯಲ್ಲಿ ಆತ್ಮನಿರ್ಭರ ಭಾರತ ಸಹಿ ಸಂಗ್ರಹ ಅಭಿಯಾನಕ್ಕೆ ಅತಿಥಿಗಳೆಲ್ಲರೂ ಸಹಿ ಹಾಕಿ ಚಾಲನೆ ನೀಡಿದರು.

    ಗುಡಿ ಕೈಗಾರಿಕೆಗಳಾದ  ಕೈಮಗ್ಗ ನೇಕಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಬಡಗಿ, ಆಲೆಮನೆ ಮುಂತಾದವುಗಳ ಪ್ರದರ್ಶನ ಮತ್ತು ಬೃಹತ್ ಗ್ರಹೋತ್ಪನ್ನಗಳ ಮಾರಾಟ ಈ ಹಬ್ಬದ ಆಕರ್ಷಣೆಯಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.

    ಕೃಷಿ – ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳು, ಮುದ್ರಾ, ಉಜ್ವಲ, ಸ್ಟಾರ್ಟ್ ಅಪ್ ಇಂಡಿಯಾ, ಕೌಶಲ್ಯ ಅಭಿವೃದ್ದಿ,

PMEGP, PMFME, ಪಿಎಂ ಸೂರ್ಯ ಘರ್ ಇತ್ಯಾದಿ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ – ಮಾರ್ಗದರ್ಶನ ಕಾರ್ಯಕ್ರಮ ನಡೆಯುತ್ತಿದೆ.

    ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ  ಜಯಕರ್ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಲಕ್ಷ್ಮಿಕಾಂತ್ ಬೆಸ್ಕೂರ್, ಮನೋಹರ್ ಶೆಟ್ಟಿ ತೋನ್ಸೆ, ದಿವಾಕರ್ ಸನಿಲ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಕ್ಷಮಾ ಪಾಟೀಲ್, ಸುನಿಲ್ ಹೆಚ್, ಸ್ವದೇಶಿ ಹಬ್ಬ ಅಭಿಯಾನದ ಜಿಲ್ಲಾ ಸಂಚಾಲಕ ರತ್ನಾಕರ ಇಂದ್ರಾಳಿ,  ಪ್ರಮುಖರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶಿವಕುಮಾರ್ ಅಂಬಲಪಾಡಿ, ಕಿಶೋರ್ ಕರಂಬಳ್ಳಿ, ಮಹಾವೀರ್ ಜೈನ್, ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.