• Home  
  • ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜನೆ : ಪ್ರಧಾನಿ ಮೋದಿ (Sudarshan Chakra to be deployed to protect major cities in India: PM Modi)
- ಧಾರ್ಮಿಕ

ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜನೆ : ಪ್ರಧಾನಿ ಮೋದಿ (Sudarshan Chakra to be deployed to protect major cities in India: PM Modi)

Share: ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜನೆ : ಪ್ರಧಾನಿ ಮೋದಿ ಉಡುಪಿಯ ಮಠಾಧೀಶ  ಶ್ರೀಸುಗುಣೇಂದ್ರ ತೀರ್ಥರ  ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ   (Udupi) ಉಡುಪಿ: ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜಿಸಿದ್ದೇವೆ. ಇದನ್ನು ಬೇಧಿಸಲು ಯತ್ನಿಸುವವರು ಸರ್ವನಾಶವಾಗುತ್ತಾರೆ. ಆಪರೇಶನ್ ಸಿಂಧೂರದಲ್ಲಿಯೂ ನಮ್ಮದು ಇದೇ ಸಂಕಲ್ಪ ಇತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀ ಪಾದರ […]

  (Udupi) ಉಡುಪಿ: ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜಿಸಿದ್ದೇವೆ. ಇದನ್ನು ಬೇಧಿಸಲು ಯತ್ನಿಸುವವರು ಸರ್ವನಾಶವಾಗುತ್ತಾರೆ. ಆಪರೇಶನ್ ಸಿಂಧೂರದಲ್ಲಿಯೂ ನಮ್ಮದು ಇದೇ ಸಂಕಲ್ಪ ಇತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ನಡೆದ ವಿಶ್ವ ಗೀತಾ ಪರ್ಯಾಯ-ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಮಠದ  ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಹಿಂದಿನ ಸರ್ಕಾರಗಳಾಗಿದ್ದರೆ ಇಂತಹ ಸಂದರ್ಭದಲ್ಲಿ ಕೈಕಟ್ಟಿಕೊಂಡು ಕುಳಿತಿರುತಿದ್ದವು. ಆದರೆ ಇದು ಹೊಸ ಭಾರತ. ಯಾರಿಗೂ ತಲೆ ಬಾಗಿಸುವುದಿಲ್ಲ. ಕರ್ತವ್ಯದಲ್ಲಿ ಹಿಂಜರಿಯುವುದಿಲ್ಲ. ಭಾರತಕ್ಕೆ ಶಾಂತಿ ಸ್ಥಾಪನೆಯೂ ಗೊತ್ತು, ಶಾಂತಿಯ ರಕ್ಷಣೆಯೂ ಗೊತ್ತು ಎಂದು ಮೋದಿ ಹೇಳಿದರು.

   ಜಲ ಸಂರಕ್ಷಣೆ, ನದಿಗಳ ಉಳಿಸುವಿಕೆ ಸೇರಿದಂತೆ ಪ್ರತಿಯೊಬ್ಬ ಭಾರತೀಯರು 9 ಸಂಕಲ್ಪಗಳನ್ನು ತೊಡುವಂತೆ ಪ್ರಧಾನಿ ನರೇಂದ್ರ ಮೋದಿ ಆವರು ದೇಶದ ಜನತೆಗೆ ಕರೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ಮುಖಂಡರಾದ ಬಿ. ವೈ. ವಿಜಯೇಂದ್ರ, ರಾಜ್ಯ ಸಭಾ ಸಂಸದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕರಾದ ವಿ ಸುನಿಲ್ ಕುಮಾರ್, ಯಶ್ ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.