• Home  
  • ಉಡುಪಿ: ಸನಾತನ ಧರ್ಮದ ಜಾಗೃತಿಗಾಗಿ ಸಮಾನ ಮನಸ್ಕರ ತಂಡದಿಂದ ದೇಗುಲಗಳಿಗೆ ಪಾದಯಾತ್ರೆ (Udupi: A group of like-minded people marches to temples to raise awareness of Sanatan Dharma)
- ಧಾರ್ಮಿಕ

ಉಡುಪಿ: ಸನಾತನ ಧರ್ಮದ ಜಾಗೃತಿಗಾಗಿ ಸಮಾನ ಮನಸ್ಕರ ತಂಡದಿಂದ ದೇಗುಲಗಳಿಗೆ ಪಾದಯಾತ್ರೆ (Udupi: A group of like-minded people marches to temples to raise awareness of Sanatan Dharma)

Share: ಉಡುಪಿ: ಸನಾತನ ಧರ್ಮದ ಜಾಗೃತಿಗಾಗಿ ಸಮಾನ ಮನಸ್ಕರ ತಂಡದಿಂದ ದೇಗುಲಗಳಿಗೆ ಪಾದಯಾತ್ರೆ (Udupi) ಉಡುಪಿ: ಉಡುಪಿಯ ಸಮಾನ ಮನಸ್ಕರ ತಂಡವೊಂದು ಸನಾತನ ಧರ್ಮದ ಜಾಗೃತಿ ಹಾಗೂ ಅರಿವಿಗಾಗಿ ಪ್ರತಿ ತಿಂಗಳು ದೇವಸ್ಥಾನಗಳಿಗೆ   ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದು, ಬೆಳಿಗ್ಗೆ ನಾಲ್ಕು ಮೂವತ್ತಕ್ಕೆ ಸರಿಯಾಗಿ ಉಡುಪಿಯ ಕೃಷ್ಣ ಮಠದಿಂದ ಹೊರಟು ಇನ್ನಂಜೆ ಗ್ರಾಮದ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಆಗಮಿಸಿದೆ.  ಈ ಬಾರಿ 126 ನೇಯ ಪಾದಯಾತ್ರೆಯನ್ನು ಆಯೋಜಿಸಿದ್ದು, ತಂಡದಲ್ಲಿ40 ಭಕ್ತಾಧಿಗಳಿದ್ದರು. ಈ ತಂಡವು ವಾದಿರಾಜ ಶೇಟ್ ಅವರ ಮುಂದಾಳತ್ವದಲ್ಲಿ […]

(Udupi) ಉಡುಪಿ: ಉಡುಪಿಯ ಸಮಾನ ಮನಸ್ಕರ ತಂಡವೊಂದು ಸನಾತನ ಧರ್ಮದ ಜಾಗೃತಿ ಹಾಗೂ ಅರಿವಿಗಾಗಿ ಪ್ರತಿ ತಿಂಗಳು ದೇವಸ್ಥಾನಗಳಿಗೆ   ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದು, ಬೆಳಿಗ್ಗೆ ನಾಲ್ಕು ಮೂವತ್ತಕ್ಕೆ ಸರಿಯಾಗಿ ಉಡುಪಿಯ ಕೃಷ್ಣ ಮಠದಿಂದ ಹೊರಟು ಇನ್ನಂಜೆ ಗ್ರಾಮದ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಆಗಮಿಸಿದೆ.

 ಈ ಬಾರಿ 126 ನೇಯ ಪಾದಯಾತ್ರೆಯನ್ನು ಆಯೋಜಿಸಿದ್ದು, ತಂಡದಲ್ಲಿ40 ಭಕ್ತಾಧಿಗಳಿದ್ದರು.

ಈ ತಂಡವು ವಾದಿರಾಜ ಶೇಟ್ ಅವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿದೆ.

 ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನದ ಪರವಾಗಿ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿಯವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದವನ್ನು ವಿತರಿಸಿದರು.

 ಆಗಮಿಸಿದ ಎಲ್ಲಾ ಭಜಕರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ತಂಡದಲ್ಲಿ ಹಿರಿಯ ಸದಸ್ಯರಾದ ಸತೀಶ್ ಬಂಗೇರ, ದಿನೇಶ್ ಅಮೀನ್, ನಿತಿನ್ ಪೈ ಮೊದಲಾದವರು ಉಪಸ್ಥಿತರಿದ್ದರು.

ಸುಮಾರು ನೂರ ಅರವತ್ತು ಸದಸ್ಯರನ್ನು ಒಳಗೊಂಡ ಈ ತಂಡ, ಹತ್ತು ವರ್ಷದಿಂದ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.