ಉಡುಪಿ: ಸರಕಾರಿ ವಸತಿ ಸಂಕೀರ್ಣದಲ್ಲಿ ಕಳ್ಳತನ : ಅಂತರ್‌ರಾಜ್ಯ ಕಳ್ಳರ ಬಂಧನ-ನಗ, ನಗದು ವಶ
(Udupi) ಉಡುಪಿ: ಉಡುಪಿಯ ಮಿಷನ್ ಕಂಪೌಂಡ್ ನಲ್ಲಿರುವ ಲೋಕೋಪಯೋಗಿ ವಸತಿ ಸಮುಚ್ಚಯದಲ್ಲಿ ಕಳ್ಳತನ ನಡೆಸಿದ ಅಂತರ್ ರಾಜ್ಯ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ
ಬಂಗಡ ರಮೇಶ್ ಜವಾನ್ ಸಿಂಗ್(37), ಕಾಲಿಯಾ ಕಾಲು(25) ಬಂಧಿತರು.
ಇವರು ಮಧ್ಯಪ್ರದೇಶ ಮೂಲದವರಾಗಿದ್ದಾರೆ. ಆರೋಪಿಗಳಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್‌ಲೈಟ್ ಸೇರಿ ಒಟ್ಟು 80,970 ರೂ. ಮೌಲ್ಯದ 681.830 ಮಿಲಿ ಗ್ರಾಂನ ಬೆಳ್ಳಿಯ ಸೊತ್ತು, 470 ಮಿಲಿಗ್ರಾಂ ಚಿನ್ನ ಹಾಗೂ 1700 ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮಧ್ಯಪ್ರದೇಶ ರಾಜ್ಯದವರಾಗಿದ್ದು, ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ. ಅಲ್ಲದೇ ತಮ್ಮ ಸಹಚರರೊಂದಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿದವರಾಗಿದ್ದಾರೆ.
ಇವರ ಮೇಲೆ ಮಹಾರಾಷ್ಟ್ರ ರಾಜ್ಯದಲ್ಲಿ ಸಹ ಪ್ರಕರಣಗಳು ದಾಖಲಾಗಿವೆ ಎಂದು ಉಡುಪಿ ಪೊಲೀಸ್ ಮೂಲ ತಿಳಿಸಿದೆ.
ಈ ಪ್ರಕರಣದ ತನಿಖೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ, ಪ್ರಭು ಡಿ.ಟಿ ಡಿ.ವೈ.ಎಸ್.ಪಿ ಉಡುಪಿರವರ ನೇತೃತ್ವದಲ್ಲಿ ಮಂಜುನಾಥ ಬಡಿಗೇರ, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಠಾಣೆ ಹಾಗೂ ಉಡುಪಿ ನಗರ ಠಾಣಾ ಪಿಎಸ್‌ಐ ರವರಾದ ಭರತೇಶ್ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ., ಗೋಪಾಲಕೃಷ್ಣ ಜೋಗಿ ಹಾಗೂ ಸಿಬ್ಬಂದಿಯವರಾದ ಹೆಚ್‌ಸಿ ಹರೀಶ್, ಹೆಚ್‌ಸಿ ಪ್ರಸನ್ನ ಸಿ, ಹೆಚ್‌ಸಿ ಬಶೀರ್, ಹೆಚ್‌ಸಿ ಜಯಕರ್, ಪಿಸಿ ಶಿವು ಕುಮಾರ್, ಪಿಸಿ ಹೇಮಂತ, ಪಿಸಿ ಆನಂದ, ಪಿಸಿ ಗಫೂರ್, ಪಿಸಿ ಸಂತೋಷ್ ರಾಥೋಡ್, ಪಿಸಿ ಮಲ್ಲಯ್ಯ, ಪಿಸಿ ಓಬಳೇಶ್, ಪಿಸಿ ಕಾರ್ತಿಕ್, ಪಿಸಿ ಕುಮಾರ್ ಕೊಪ್ಪದ್, ಪಿಸಿ ವಿನಯ್ ಕುಮಾರ್, ಎಹೆಚ್‌ಸಿ ಸಂತೋಷ್ ರವರ ತಂಡ ಉಡುಪಿಯ ಸರ್ಕಸ್ ಗ್ರೌಂಡ್, ರಾಷ್ಟ್ರೀಯ ಹೆದ್ದಾರಿ 66 ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

