ಉಡುಪಿ: ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರ್ಯಾಂಡ್ ‘ಝೀಕೋಡ್’ಮಳಿಗೆ ಪ್ರಾರಂಭ
ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಯಲ್ಲಿ ವಿಶೇಷ ರಿಯಾಯಿತಿ, ಆಕರ್ಷಕ ಕೊಡುಗೆ ಘೋಷಿಸಲಾಗಿದೆ.
(Udupi) ಉಡುಪಿ: ಯುವಜನರ ಫ್ಯಾಷನ್ ಅಭಿರುಚಿಗೆ ತಕ್ಕಂತೆ ಆಧುನಿಕ ಹಾಗೂ ಟ್ರೆಂಡಿ ಉಡುಪುಗಳನ್ನು ಪರಿಚಯಿಸುವ ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರ್ಯಾಂಡ್ ‘ಝೀಕೋಡ್’(ZECODE) ಉಡುಪಿಯಲ್ಲಿ ತನ್ನ ನೂತನ ಮಳಿಗೆಯನ್ನು ಉಡುಪಿಯಲ್ಲಿ ಆರಂಭಿಸಿದೆ.
ನಗರದ ಕಲ್ಸಂಕದಲ್ಲಿರುವ ಟೈಮ್ ಸ್ಕ್ವೇರ್ ಮಾಲ್ನಲ್ಲಿರುವ ಮಳಿಗೆಯು ಶನಿವಾರ ಅದ್ಧೂರಿಯಾಗಿ ಶುಭಾರಂಭಗೊಂಡಿತು.
ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಆಯೋಜಿಸಲಾಗಿದ್ದ ಆಕರ್ಷಕ ಫ್ಯಾಷನ್ ಶೋ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಬ್ರ್ಯಾಂಡ್ನ ನೂತನ ಕಲೆಕ್ಷನ್ಗಳನ್ನು ಮಾಡೆಲ್ಗಳು ರ್ಯಾಂಪ್ ಮೇಲೆ ಪ್ರದರ್ಶಿಸುವ ಮೂಲಕ ಝೀಕೋಡ್ನ ವಿಭಿನ್ನ ಫ್ಯಾಷನ್ ಲೋಕವನ್ನು ಅನಾವರಣಗೊಳಿಸಿದರು.
ಆಧುನಿಕ ವಿನ್ಯಾಸ, ವೈವಿಧ್ಯಮಯ ಬಣ್ಣಗಳು ಹಾಗೂ ಯುವಜನರ ಅಭಿರುಚಿಗೆ ಹೊಂದುವ ಉಡುಪುಗಳು ಫ್ಯಾಷನ್ ಪ್ರಿಯರ ಗಮನ ಸೆಳೆದವು.
ಕಾಲೇಜು ವೇರ್, ಆಫೀಸ್ ವೇರ್, ಎಥ್ನಿಕ್ ವೇರ್ ಹಾಗೂ ಔಟ್ಡೋರ್ ವೇರ್ ಸೇರಿದಂತೆ ನಾಲ್ಕು ಪ್ರಮುಖ ವಿಭಾಗಗಳಲ್ಲಿ ವಿವಿಧ ವಿನ್ಯಾಸದ ಉಡುಪುಗಳು ಮಳಿಗೆಯಲ್ಲಿ ಲಭ್ಯವಿವೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳು ಹಾಗೂ ಆಧುನಿಕ ಫ್ಯಾಷನ್ ಇಷ್ಟ ಪಡುವ ಗ್ರಾಹಕರವರೆಗೆ ಎಲ್ಲ ವಯೋಮಾನದವರ ಅಭಿರುಚಿಗೆ ತಕ್ಕ ಉಡುಪುಗಳನ್ನು ಒಂದೇ ಸೂರಿನಡಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ನೂತನ ಕಲೆಕ್ಷನ್ಗಳ ಪ್ರದರ್ಶನ, ಲೈವ್ ಸಂಗೀತ ಹಾಗೂ ಮನರಂಜನಾ ಚಟುವಟಿಕೆಗಳು ನಡೆದವು. ಫ್ಯಾಷನ್, ಆತ್ಮವಿಶ್ವಾಸ ಮತ್ತು ವೈಯಕ್ತಿಕ ಶೈಲಿಗೆ ಆದ್ಯತೆ ನೀಡುವ ಝೀಕೋಡ್, ಉಡುಪಿಯ ಫ್ಯಾಷನ್ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.
ಇನ್ನು ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಯಲ್ಲಿ ವಿಶೇಷ ರಿಯಾಯಿತಿಗಳು ಹಾಗೂ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ. ಗ್ರಾಹಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಮುಖರಾದ ಜಯಕರ್ ಶೆಟ್ಟಿಗಾರ್ ತಿಳಿಸಿದ್ದಾರೆ.

