• Home  
  •  ಉದ್ಯಾವರ ದೋಣಿ ಮಗುಚಿ ಮೀನುಗಾರ ಸಾವು ಪ್ರಕರಣ : ಸಚಿವ ಮಂಕಾಳ್ ವೈದ್ಯ ಭೇಟಿ, ಸಾಂತ್ವಾನ (Fisherman dies after boat capsizes in Udyavara: Minister Mankal Vaidhya visits)
- ಅಪಘಾತ - ರಾಜಕೀಯ

 ಉದ್ಯಾವರ ದೋಣಿ ಮಗುಚಿ ಮೀನುಗಾರ ಸಾವು ಪ್ರಕರಣ : ಸಚಿವ ಮಂಕಾಳ್ ವೈದ್ಯ ಭೇಟಿ, ಸಾಂತ್ವಾನ (Fisherman dies after boat capsizes in Udyavara: Minister Mankal Vaidhya visits)

Share: ಉದ್ಯಾವರ ದೋಣಿ ಮಗುಚಿ ಮೀನುಗಾರ ಸಾವು ಪ್ರಕರಣ : ಸಚಿವ ಮಂಕಾಳ್ ವೈದ್ಯ ಭೇಟಿ, ಸಾಂತ್ವನ (Udhyavara) ಉದ್ಯಾವರ : ಉದ್ಯಾವರ ಪಿತ್ರೋಡಿ ನಿವಾಸಿ ನೀಲಾಧರ್ ತಿಂಗಳಾಯರವರು ಕೆಲ ದಿನಗಳ ಹಿಂದೆ ನಾಡದೋಣಿ ಮೀನುಗಾರಿಗೆ ತೆರಳಿದ್ದ ಸಂದರ್ಭ ಬೃಹತ್‌ ಅಲೆಯೊಂದಕ್ಕೆ ಸಿಲುಕಿದ ದೋಣಿ ಮುಗುಚಿ ಮೃತಪಟ್ಟಿದ್ದರು. ನೀಲಾಧರ್‌ರವರನ್ನು ಕಳೆದು ಕೊಂಡ ಬಡ ಮೀನುಗಾರ ಕುಟುಂಬ ತುಂಬಾ ದುಖ ಮತ್ತು ಸಂಕಷ್ಟದಲ್ಲಿತ್ತು. ಮಂಗಳವಾರ ನೀಲಾಧರ್‌ಅವರ ನಿವಾಸಕ್ಕೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ […]

(Udhyavara) ಉದ್ಯಾವರ : ಉದ್ಯಾವರ ಪಿತ್ರೋಡಿ ನಿವಾಸಿ ನೀಲಾಧರ್ ತಿಂಗಳಾಯರವರು ಕೆಲ ದಿನಗಳ ಹಿಂದೆ ನಾಡದೋಣಿ ಮೀನುಗಾರಿಗೆ ತೆರಳಿದ್ದ ಸಂದರ್ಭ ಬೃಹತ್‌ ಅಲೆಯೊಂದಕ್ಕೆ ಸಿಲುಕಿದ ದೋಣಿ ಮುಗುಚಿ ಮೃತಪಟ್ಟಿದ್ದರು.

ನೀಲಾಧರ್‌ರವರನ್ನು ಕಳೆದು ಕೊಂಡ ಬಡ ಮೀನುಗಾರ ಕುಟುಂಬ ತುಂಬಾ ದುಖ ಮತ್ತು ಸಂಕಷ್ಟದಲ್ಲಿತ್ತು.

ಮಂಗಳವಾರ ನೀಲಾಧರ್‌ಅವರ ನಿವಾಸಕ್ಕೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಮಂಜೂರಾದ 10 ಲಕ್ಷ ಪರಿಹಾರ ಧನದ ಚೆಕ್ಕನ್ನು ಸಚಿವರು ವಿತರಿಸಿದರು.  

 ಅಂತೆಯೇ ಹಾನಿಗೀಡಾದ ದೋಣಿ ಮಾಲಕರಿಗೆ 5 ಲಕ್ಷ ರೂಪಾಯಿ ಚೆಕ್ ವಿತರಿಸಿದರು.

 ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ರಾಜೇಶ್ ಕುಂದರ್, ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.