• Home  
  • ಗಂಗೊಳ್ಳಿ : ಮೀನುಗಾರಿಕೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆ, ಓರ್ವನ ರಕ್ಷಣೆ (Gangolli: Three missing after fishing boat capsizes, one rescued)
- Mansoon - MISSING - ಅಪಘಾತ

ಗಂಗೊಳ್ಳಿ : ಮೀನುಗಾರಿಕೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆ, ಓರ್ವನ ರಕ್ಷಣೆ (Gangolli: Three missing after fishing boat capsizes, one rescued)

Share: ಗಂಗೊಳ್ಳಿ : ಮೀನುಗಾರಿಕೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆ, ಓರ್ವನ ರಕ್ಷಣೆ (Gangolli) ಗಂಗೊಳ್ಳಿ : ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆಯಾಗಿದ್ದು, ಓರ್ವ ಈಜಿ ಕೊಂಡು ಬರುತ್ತಿದ್ದಾಗ ಮತ್ತೊಂದು ದೋಣಿಯವರು ರಕ್ಷಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.   ಸಿಪಾಯಿ ಸುರೇಶ್‌ ಎಂಬವರ ಮಾಲೀಕತ್ವದ ದೋಣಿಯಲ್ಲಿ ಮಂಗಳವಾರ ಬೆಳಿಗ್ಗೆ ನಾಲ್ವರು ಮೀನುಗಾರಿಗೆ ತೆರಳಿದ್ದರು. ಸಮುದ್ರ ಏಕಾಏಕಿ ಬಿರುಸಾಗಿದ್ದು, ಬೃಹತ್‌ ಅಲೆಗೆ ದೋಣಿ ಮುಗುಚಿ ಬಿದ್ದಿದೆ. ಗಂಗೊಳ್ಳಿಯ ಸುರೇಶ್‌ ಖಾರ್ವಿ(48), ಲೋಹಿತ್‌ […]

(Gangolli) ಗಂಗೊಳ್ಳಿ : ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆಯಾಗಿದ್ದು, ಓರ್ವ ಈಜಿ ಕೊಂಡು ಬರುತ್ತಿದ್ದಾಗ ಮತ್ತೊಂದು ದೋಣಿಯವರು ರಕ್ಷಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

  ಸಿಪಾಯಿ ಸುರೇಶ್‌ ಎಂಬವರ ಮಾಲೀಕತ್ವದ ದೋಣಿಯಲ್ಲಿ ಮಂಗಳವಾರ ಬೆಳಿಗ್ಗೆ ನಾಲ್ವರು ಮೀನುಗಾರಿಗೆ ತೆರಳಿದ್ದರು.

ಸಮುದ್ರ ಏಕಾಏಕಿ ಬಿರುಸಾಗಿದ್ದು, ಬೃಹತ್‌ ಅಲೆಗೆ ದೋಣಿ ಮುಗುಚಿ ಬಿದ್ದಿದೆ.

ಗಂಗೊಳ್ಳಿಯ ಸುರೇಶ್‌ ಖಾರ್ವಿ(48), ಲೋಹಿತ್‌ ಖಾರ್ವಿ(34) , ಜಗದೀಶ್‌ ಖಾರ್ವಿ (50)ನಾಪತ್ತೆ ಆದವರು. ಸಂತೋಷ್‌ ಖಾರ್ವಿ (35) ಈಜಿ ಪಾರಾಗಿದ್ದಾರೆ.

ಮೂವರು ಮೀನುಗಾರಿಗಾಗಿ ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಸ್ಥಳಿಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.