• Home  
  • ಬಂಟಕಲ್ : ತಾಂತ್ರಿಕ ಕಾಲೇಜಿನಲ್ಲಿ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ (Bantakal: Five-day faculty development workshop at technical college)
- ಶಾಲಾ ಕಾಲೇಜು

ಬಂಟಕಲ್ : ತಾಂತ್ರಿಕ ಕಾಲೇಜಿನಲ್ಲಿ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ (Bantakal: Five-day faculty development workshop at technical college)

Share: ಬಂಟಕಲ್ : ತಾಂತ್ರಿಕ ಕಾಲೇಜಿನಲ್ಲಿ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಕೋರೆಲ್ ಟೆಕ್ನಾಲಜೀಸ್, ಬೆಂಗಳೂರು, ಕಾಲೇಜಿನ ಐಎಸ್‌ಟಿಇ ಘಟಕ ಮತ್ತು ಐಇಇಇ ಘಟಕ ಇದರ ಸಹಯೋಗದೊಂದಿಗೆ “ಎಐ ಮ್ಯಾಟ್‌ಲ್ಯಾಬ್ ಆಧಾರಿತ ಹಾರ್ಡ್ವೇರ್ ಇಂಟಿಗ್ರೇಷನ್‌ನೊಂದಿಗೆ ಆಳವಾದ ಕಲಿಕೆ” ಎಂಬ ವಿಷಯದ ಕುರಿತು ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ   ಆಯೋಜಿಸಲಾಯಿತು.   ಕೋರೆಲ್ ಟೆಕ್ನಾಲಜೀಸ್ ಇದರ ಹಿರಿಯ ಇಂಜಿನಿಯರ್ ರಕ್ಷಿತ್ ಬಿ […]

(Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಕೋರೆಲ್ ಟೆಕ್ನಾಲಜೀಸ್, ಬೆಂಗಳೂರು, ಕಾಲೇಜಿನ ಐಎಸ್‌ಟಿಇ ಘಟಕ ಮತ್ತು ಐಇಇಇ ಘಟಕ ಇದರ ಸಹಯೋಗದೊಂದಿಗೆ “ಎಐ ಮ್ಯಾಟ್‌ಲ್ಯಾಬ್ ಆಧಾರಿತ ಹಾರ್ಡ್ವೇರ್ ಇಂಟಿಗ್ರೇಷನ್‌ನೊಂದಿಗೆ ಆಳವಾದ ಕಲಿಕೆ” ಎಂಬ ವಿಷಯದ ಕುರಿತು ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ   ಆಯೋಜಿಸಲಾಯಿತು.

  ಕೋರೆಲ್ ಟೆಕ್ನಾಲಜೀಸ್ ಇದರ ಹಿರಿಯ ಇಂಜಿನಿಯರ್ ರಕ್ಷಿತ್ ಬಿ ಎಸ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕಾರ್ಯಾಗಾರ ಉದ್ಘಾಟಿಸಿದರು.

  ಈ ಸಂದರ್ಭದಲ್ಲಿ ಸುಧಾರಿತ ಮ್ಯಾಟ್‌ಲ್ಯಾಬ್ ತಂತ್ರಗಳ ಬಗ್ಗೆ ಮಾತನಾಡಿ, ಮುಂದಿನ ಅಧಿವೇಶನಕ್ಕೆ ಬಲವಾದ ಅಡಿಪಾಯವನ್ನು ಹಾಕಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲರೂ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಇಂತಹ ಕಾರ್ಯಗಾರಗಳು ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಸಾಮರ್ಥ್ಯ ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ ಎಂದರು.

ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೌಮ್ಯ ಜೆ  ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜಕರಾದ ಡಾ. ಸದಾನಂದ ಎಲ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.