ಪುರಾಣ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವತಿಯಿಂದ ಪರಿವಾರ ದೈವಗಳಾದ ವಾರ್ತಾಳಿ ಪಾಶಾಣ ಕಲ್ಲುರ್ಟಿ ದೈವದ ಸಿರಿ ಸಿಂಗಾರದ ನೇಮ ಜರಗಿತು.
ಮೊದಲಿಗೆ ನವಕ ಪ್ರಧಾನ ಕಲಶ ಅಭಿಷೇಕ, ಭಂಡಾರ ಇಳಿದು ಮಹಾ ಅನ್ನಸಂತರ್ಪಣೆ ಸಂಪನ್ನಗೊಂಡಿತು
ಇದೇ ಸಂದರ್ಭ ದರ್ಶನ ಸೇವೆ ಸಂಪನ್ನ ಗೊಂಡಿತು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯು ಪ್ರಭಾಕರ್ ರಾವ್, ಕಾರ್ಯಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಆಚಾರ್ಯ ಕೋಶಾಧಿಕಾರಿ ಶ್ರೀನಿವಾಸ್ ಯು ಬಿ, ಗಣಪತಿ ಕಾರಂತ್, ಕಾರ್ಯ ಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

