ಉಪ್ಪಿನಂಗಡಿ; ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ, ಯುವಕ ಮೃತ್ಯು
ಉಪ್ಪಿನಂಗಡಿ; ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮಂಗಳೂರು- ಬೆಂಗಳೂರು ರಸ್ತೆಯ ಉಪ್ಪಿನಂಗಡಿಯ ಸಣ್ಣಂಪಾಡಿ ಎಂಬಲ್ಲಿ ಘಟನೆ ನಡೆದಿದೆ.
ನೆಲ್ಯಾಡಿ ಮೊರೆಂಕಳನಿವಾಸಿ ಇಕ್ಬಾಲ್(25) ಮೃತ ದುರ್ದೈವಿ.
ಇಕ್ಬಾಲ್ ಕೆಲಸದ ನಿಮಿತ್ತ ಉಪ್ಪಿನಂಗಡಿಗೆ ಬಂದಿದ್ದು, ಬಳಿಕ ಕೆಲಸ ಮುಗಿಸಿ ವಾಪಾಸ್ಸು ತೆರಳುವಾಗ ಬೈಕ್ ಸಣ್ಣಂಪಾಡಿ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

