• Home  
  • ಎನ್. ಹೆಚ್ 169ಎ ಭೂಸ್ವಾಧೀನ  ಪರಿಹಾರದ ಬಗ್ಗೆ ಕುಂದಾಪುರ ಎ. ಸಿ ಕಚೇರಿಯಲ್ಲಿ ಸಂಸದ ಕೋಟ ಸಭೆ (MP Kota holds meeting at Kundapura AC office regarding land acquisition compensation for NH 169A)
- PROBLEMS

ಎನ್. ಹೆಚ್ 169ಎ ಭೂಸ್ವಾಧೀನ  ಪರಿಹಾರದ ಬಗ್ಗೆ ಕುಂದಾಪುರ ಎ. ಸಿ ಕಚೇರಿಯಲ್ಲಿ ಸಂಸದ ಕೋಟ ಸಭೆ (MP Kota holds meeting at Kundapura AC office regarding land acquisition compensation for NH 169A)

Share: ಎನ್. ಹೆಚ್ 169ಎ ಭೂಸ್ವಾಧೀನ  ಪರಿಹಾರದ ಬಗ್ಗೆ ಕುಂದಾಪುರ ಎ. ಸಿ ಕಚೇರಿಯಲ್ಲಿ ಸಂಸದ ಕೋಟ ಸಭೆ ಕುಂದಾಪುರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆ (Udupi) ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ನ, ಕರಾವಳಿ ಜಂಕ್ಷನ್ ಮತ್ತು ಮಲ್ಪೆ ರಸ್ತೆಗೆ ಸಂಬಂಧಿಸಿದಂತೆ ಭೂ ಪರಿಹಾರ, ಜಂಟಿ ಖಾತೆಗಳ ಸರ್ವೆ, ಮೂಲಿ ಹಕ್ಕಿನ ವಿವಾದಗಳನ್ನು ಪರಿಹರಿಸಿ, ಭೂಮಾಲೀಕರಿಗೆ ಹಣ ಪಾವತಿ ಮಾಡಲು ಕರಾವಳಿ-ಮಲ್ಪೆ ಸಂಪರ್ಕ ರಸ್ತೆಯ ನಿರ್ಮಾಣದ ಅಂತಿಮ ಹಂತದ ಸಭೆಯು ಸಂಸದ ಕೋಟ ಶ್ರೀನಿವಾಸ […]

(Udupi) ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ನ, ಕರಾವಳಿ ಜಂಕ್ಷನ್ ಮತ್ತು ಮಲ್ಪೆ ರಸ್ತೆಗೆ ಸಂಬಂಧಿಸಿದಂತೆ ಭೂ ಪರಿಹಾರ, ಜಂಟಿ ಖಾತೆಗಳ ಸರ್ವೆ, ಮೂಲಿ ಹಕ್ಕಿನ ವಿವಾದಗಳನ್ನು ಪರಿಹರಿಸಿ, ಭೂಮಾಲೀಕರಿಗೆ ಹಣ ಪಾವತಿ ಮಾಡಲು ಕರಾವಳಿ-ಮಲ್ಪೆ ಸಂಪರ್ಕ ರಸ್ತೆಯ ನಿರ್ಮಾಣದ ಅಂತಿಮ ಹಂತದ ಸಭೆಯು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ  ಕುಂದಾಪುರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯಿತು.

  ಮಲ್ಪೆ, ಕೊಡವೂರು ಭಾಗದ 50 ಮಂದಿ ಭೂ ಮಾಲೀಕರು,  ಮತ್ತು 25ಕ್ಕೂ ಹೆಚ್ಚು ಮಂದಿ ಜಂಟಿ ಖಾತೆದಾರರಿಗೆ ಹಾಗೂ ಮೂಲಿಹಕ್ಕು ಪರಿಹಾರದ ಬಗ್ಗೆ ಚರ್ಚಿಸಿ 15 ದಿನಗಳೊಳಗೆ ಪರಿಹಾರದ ಕಾರ್ಯ ನಡೆಯಬೇಕೆಂದು ನೂತನ ಎ.ಸಿ ಮಹೇಶರಿಗೆ ಸಂಸದರು ಸೂಚಿಸಿದರು.

  ಅಲ್ಲದೆ, ಕಾರ್ಕಳ ತಾಲೂಕಿನ ಮಾಳಾದ 4 ಮಂದಿ, ಮಿಯಾರಿನ 19 ಮಂದಿ, ಮುಡಾರು  ಮತ್ತು ಸಾಣೂರಿನ 39 ಮಂದಿಗೆ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಲು ಮತ್ತು ಹಿರಿಯಡ್ಕ ಪೇಟೆಯ ಕಟ್ಟಡಗಳ ತೆರವುಗೊಳಿಸಲು ಇರುವ ಅಡೆತಡೆಗಳನ್ನು ಪರಿಹರಿಸಿ ಸಮರ್ಪಕಗೊಳಿಸಲು ಸಂಸದ  ಕೋಟ ಸೂಚನೆ ನೀಡಿದರು.

  ಸಭೆಯಲ್ಲಿ ಕುಂದಾಪುರದ ಎ.ಸಿ ಮಹೇಶ್, ರಾಷ್ಟ್ರೀಯ ಹೆದ್ದಾರಿ 169ಎನ ಅಧಿಕಾರಿಗಳಾದ ಮಂಜುನಾಥಗೌಡ, ನವೀನ್, ಮಾಜಿ ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಗಿರೀಶ್ ಅಂಚನ್, ಶಿವಪುರ ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.