• Home  
  • ಎರ್ಮಾಳಿನಲ್ಲಿ ಅಕ್ರಮ ಮರಳು ದಾಸ್ತಾನು: ಅಧಿಕಾರಿಗಳಿಂದ  ದಾಳಿ
- ಅಪರಾಧ

ಎರ್ಮಾಳಿನಲ್ಲಿ ಅಕ್ರಮ ಮರಳು ದಾಸ್ತಾನು: ಅಧಿಕಾರಿಗಳಿಂದ  ದಾಳಿ

Share:   ಅಕ್ರಮವಾಗಿ ಎರ್ಮಾಳಿನ ಖಾಸಗಿ ಜಾಗದಲ್ಲಿ ಬಾರೀ ಮರಳು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಗಣಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಮಾಡಿ ಆರೋಪಿಗೆ ನೋಟೀಸು ನೀಡಿದ್ದಾರೆ. ಅಕ್ರಮ ಮರಳು ದಂಧೆಯ ಆರೋಪಿ  ಗಿರೀಶ್ ಎರ್ಮಾಳಿನ ಪೂಂದಾಡು ಮೈದಾನ ಸಮೀಪ,  ಎರ್ಮಾಳುರವರು ಪಡುಬಿದ್ರಿಯ ಅಬ್ಬೇಡಿ ರಸ್ತೆಯ ನಾಗರಾಜ ನಗರ ಬಳಿ, ಹಾಗೂ ಬೆಳಪುವಿನ ಪಡುಬಿದ್ರಿ ರೈಲ್ವೆ ಸ್ಟೇಷನ್ ಬಳಿಯ ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ಸಮುದ್ರ ಭಾಗ ಮರಳನ್ನು ಸುಮಾರು ಎರಡು ಲಕ್ಷ […]

  ಅಕ್ರಮವಾಗಿ ಎರ್ಮಾಳಿನ ಖಾಸಗಿ ಜಾಗದಲ್ಲಿ ಬಾರೀ ಮರಳು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಗಣಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಮಾಡಿ ಆರೋಪಿಗೆ ನೋಟೀಸು ನೀಡಿದ್ದಾರೆ.

ಅಕ್ರಮ ಮರಳು ದಂಧೆಯ ಆರೋಪಿ  ಗಿರೀಶ್ ಎರ್ಮಾಳಿನ ಪೂಂದಾಡು ಮೈದಾನ ಸಮೀಪ,  ಎರ್ಮಾಳುರವರು ಪಡುಬಿದ್ರಿಯ ಅಬ್ಬೇಡಿ ರಸ್ತೆಯ ನಾಗರಾಜ ನಗರ ಬಳಿ, ಹಾಗೂ ಬೆಳಪುವಿನ ಪಡುಬಿದ್ರಿ ರೈಲ್ವೆ ಸ್ಟೇಷನ್ ಬಳಿಯ ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ಸಮುದ್ರ ಭಾಗ ಮರಳನ್ನು ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ 75ಟನ್ ಮರಳನ್ನು ಮೂರು ಗ್ರಾಮಗಳಲ್ಲಿ ದಾಸ್ತಾನು ಮಾಡಿದ್ದು, ಗಣಿ ಇಲಾಖಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

 ಈ ಹಿಂದೆಯೂ ಇವರು ಈ ಕೃತ್ಯಗಳಲ್ಲಿ ಬಾಗಿಯಾಗಿ ದಂಡ ಕಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ.

 ಈ ಬಗ್ಗೆ ಉಡುಪಿ ಗಣಿ ಇಲಾಖಾ ಭೂ ವಿಜ್ಞಾನಿ ಗೌತಂ ಶಾಸ್ತ್ರಿ ಮಾತನಾಡಿದ ಅಕ್ರಮ ಮರಳು ದಾಸ್ತಾನು ಪ್ರದೇಶಕ್ಕೆ ದಾಳಿ ನಡೆಸಿದ, ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದ್ದು, ಮೂರು ಗ್ರಾಮಗಳಲ್ಲೂ ಅಕ್ರಮ ದಾಸ್ತಾನು ಮಾಡಲಾದ ಮರಳು ನಾನೇ ದಾಸ್ತಾನು ನಡೆಸಿರುವುದಾಗಿ ಆರೋಪಿ ಗಿರೀಶ್ ಎರ್ಮಾಳು ಒಪ್ಪಿಕೊಂಡಿದ್ದಾನೆ.

ಇಷ್ಟರಲ್ಲೇ ಆತನಿಗೆ ಸುಮಾರು ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ನೋಟಿಸು ನೀಡಲಾಗಿದೆ. ನಿಗದಿತ ಸಮಯದಲ್ಲಿ ದಂಡ ಪಾವತಿಸದೇ ಇದ್ದಲ್ಲಿ ಆತನ ವಿರುದ್ಧ ಖಾಸಗಿ ದೂರು ನೀಡಲಾಗುವುದೆಂದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.