• Home  
  • ಪಡುಬಿದ್ರಿಯಲ್ಲಿಮುಂದುವರಿದ ಕಡಲ್ಕೊರೆತ : ಮತ್ತೆ ೫ ತೆಂಗಿನ ಮರಗಳು ಸಮುದ್ರ ಪಾಲು
- ಕರಾವಳಿ

ಪಡುಬಿದ್ರಿಯಲ್ಲಿಮುಂದುವರಿದ ಕಡಲ್ಕೊರೆತ : ಮತ್ತೆ ೫ ತೆಂಗಿನ ಮರಗಳು ಸಮುದ್ರ ಪಾಲು

Share:   ಮುಂದುವರಿದ ಭಾರೀ ಗಾಳಿ ಮಳೆಯಿಂದ ಪಡುಬಿದ್ರಿ-ಕಾಡಿಪಟ್ಣ ಬೀಚ್ ಬಳಿ ಕಡಲ್ಕೊರೆತ ಮುಂದುವರಿದಿದ್ದು, ಮಂಗಳವಾರ ಮತ್ತೆ  ಐದು ತೆಂಗಿನ ಮರಗಳು, ಬೀಚ್ ಅಭಿವೃದ್ಧಿ ಕಾಮಗಾರಿಗಳು ಸಮುದ್ರ ಪಾಲಾಗಿದ್ದು, ಮತ್ತಷ್ಟು ಹಾನಿ ಸಂಭವಿಸುವ ಭೀತಿ ಎದುರಾಗಿದೆ. ಮಂಗಳವಾರ ಮಧ್ಯಾಹ್ನ ಸಮುದ್ರದ ಅಬ್ಬರದ ಅಲೆಗಳಿಗೆ ಕಾಡಿಪಟ್ಣದ ಸುಶೀಲ್ ಕಾಂಚನ್ ಎಂಬವರಿಗೆ ಸೇರಿದ ೫ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ೬ಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರ ಪಾಲಾಗುವ ಭೀತಿ ಇದೆ.   ಕಾಡಿಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್ […]

  ಮುಂದುವರಿದ ಭಾರೀ ಗಾಳಿ ಮಳೆಯಿಂದ ಪಡುಬಿದ್ರಿ-ಕಾಡಿಪಟ್ಣ ಬೀಚ್ ಬಳಿ ಕಡಲ್ಕೊರೆತ ಮುಂದುವರಿದಿದ್ದು, ಮಂಗಳವಾರ ಮತ್ತೆ  ಐದು ತೆಂಗಿನ ಮರಗಳು, ಬೀಚ್ ಅಭಿವೃದ್ಧಿ ಕಾಮಗಾರಿಗಳು ಸಮುದ್ರ ಪಾಲಾಗಿದ್ದು, ಮತ್ತಷ್ಟು ಹಾನಿ ಸಂಭವಿಸುವ ಭೀತಿ ಎದುರಾಗಿದೆ.

ಮಂಗಳವಾರ ಮಧ್ಯಾಹ್ನ ಸಮುದ್ರದ ಅಬ್ಬರದ ಅಲೆಗಳಿಗೆ ಕಾಡಿಪಟ್ಣದ ಸುಶೀಲ್ ಕಾಂಚನ್ ಎಂಬವರಿಗೆ ಸೇರಿದ ೫ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ೬ಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರ ಪಾಲಾಗುವ ಭೀತಿ ಇದೆ.

  ಕಾಡಿಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್ ಯುವಕರ ಸಹಾಯದಿಂದ ಬೀಚ್ ಅಭಿವೃದ್ಧಿಯ ಸಿಮೆಂಟ್ ಕುರ್ಚಿಗಳನ್ನು ಪ್ರಯಾಸಪಟ್ಟು ರಕ್ಷಿಸಲಾಗಿದೆ.

 ಈ ಸಂದರ್ಭ ಅವರು ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ಕಾಮಗಾರಿಗೆ ವಿನಂತಿಸಲಾಗಿದೆ.

 ಗಾಳಿ ಮಳೆಗಳ ಆರ್ಭಟ ಮತ್ತಷ್ಟು ಪ್ರಬಲವಾಗುವ ನಿರೀಕ್ಷೆ ಇದ್ದು ಕಡಲ್ಕೊರೆತ ಮತ್ತಷ್ಟು ವಿಸ್ತರಿಸುವ ಭೀತಿ ಎದುರಾಗಿದೆ.

 ಪಡುಬಿದ್ರಿ ಬೀಚ್ ಭಾಗದಲ್ಲಿ ಸಮುದ್ರ ತಡೆಗೋಡೆ ರಚನೆಯಾಗಿಲ್ಲ. ಅಷ್ಟು ಭಾಗದಲ್ಲಿ ಬೀಚ್ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ನಡೆಸಲಾಗಿದ್ದು ಅವುಗಳಿಗೂ ಅಪಾಯ ತಟ್ಟಿದೆ.

ತಹಶೀಲ್ದಾರ್ ಸಹಿತ ಇಲಾಖಾಧಿಕಾರಿಗಳು ಶೀಘ್ರ ಘಟನಾ ಸ್ಥಳಕ್ಕೆ ಆಗಮಿಸಿ ತುರ್ತು ಪರಿಹಾರ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

kadalkoretha at pdubidri

Leave a comment

Your email address will not be published. Required fields are marked *

eMedia Kannada  @2025. All Rights Reserved.