• Home  
  • ಎರ್ಮಾಳು ಮೂಡಬೆಟ್ಟು : ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿ ಗದ್ದೆ ನೋಟ- ಕೃಷಿ ಪಾಠ (yermal Moodabettu: Field View – Agriculture Lesson under the auspices of Adarsh Sangha Adamaru)
- health - Mansoon - ಶಾಲಾ ಕಾಲೇಜು - ಸಂಘ, ಸಂಸ್ಥೆಗಳು

ಎರ್ಮಾಳು ಮೂಡಬೆಟ್ಟು : ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿ ಗದ್ದೆ ನೋಟ- ಕೃಷಿ ಪಾಠ (yermal Moodabettu: Field View – Agriculture Lesson under the auspices of Adarsh Sangha Adamaru)

Share: ಎರ್ಮಾಳು ಮೂಡಬೆಟ್ಟು : ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿ ಗದ್ದೆ ನೋಟ- ಕೃಷಿ ಪಾಠ (Yermal) ಎರ್ಮಾಳು: ಎರ್ಮಾಳು ಮೂಡಬೆಟ್ಟು ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿಮುದರಂಗಡಿ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆ ನೋಟ- ಕೃಷಿ ಪಾಠ ಎಂಬ ಕಾರ್ಯಕ್ರಮವನ್ನು ಎರ್ಮಾಳು ಮೂಡಬೆಟ್ಟು ಬರ್ಪಾಣಿ ದಿ. ಜಗನ್ನಾಥ ಶೆಟ್ಟಿಯವರ ಗೆದ್ದೆಯಲ್ಲಿ ಶನಿವಾರ ಏರ್ಪಡಿಸಲಾಗಿತ್ತು.   ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ವೈ.ಎಸ್ ಸುದರ್ಶನ್‌ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. […]

(Yermal) ಎರ್ಮಾಳು: ಎರ್ಮಾಳು ಮೂಡಬೆಟ್ಟು ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿಮುದರಂಗಡಿ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆ ನೋಟ- ಕೃಷಿ ಪಾಠ ಎಂಬ ಕಾರ್ಯಕ್ರಮವನ್ನು ಎರ್ಮಾಳು ಮೂಡಬೆಟ್ಟು ಬರ್ಪಾಣಿ ದಿ. ಜಗನ್ನಾಥ ಶೆಟ್ಟಿಯವರ ಗೆದ್ದೆಯಲ್ಲಿ ಶನಿವಾರ ಏರ್ಪಡಿಸಲಾಗಿತ್ತು.

  ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ವೈ.ಎಸ್ ಸುದರ್ಶನ್‌ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ   ಕೆ.ಎಲ್ ಕುಂಡಂತಾಯ ವಹಿಸಿದ್ದರು.

ಅವರು ಮಾತನಾಡಿ, ಭೂಮಿಯನ್ನು ಪ್ರಥ್ವಿ, ಗಂಧವತಿ ಎಂದು ಹಿರಿಯರು ಬಣ್ಣಿಸಿದ್ದಾರೆ. ಮಣ್ಣಿನ ಸುವಾಸನೆಯನ್ನು ತಿಳಿಯಬೇಕಾದರೆ, ಸುಡು ಬಿಸಿಲಿನಿಂದ ಬೆಂದ ಭೂಮಿಗೆ ಮಳೆ ನೀರು ಬಿದ್ದಾಗ ಅದರಿಂದ ಬರುವಂತಹ ಸುವಾಸನೆಯನ್ನು ಗ್ರಹಿಸಿದಾಗ ಮಾತ್ರ ಭೂಮಿಯ ಮಹತ್ವ ತಿಳಿಯುತ್ತದೆ. ಅದು ಕೃಷಿಕರನ್ನು ಪುಲಕಿತಗೊಳ್ಳುವಂತೆ ಮಾಡುತ್ತದೆ. ಎಳವೆಯಲ್ಲಿಯೇ ಮಕ್ಕಳಿಗೆ ಕೃಷಿ ಪಾಠ ನೀಡುವುದು ಸಮಾಜಕ್ಕೆ ಉತ್ತಮ ಸಂದೇಶವಾಗಿದ್ದು, ಆಯೋಜಕ ಸಂತೋಷ್‌ ಶೆಟ್ಟಿ ಬರ್ಪಾಣಿಯವರಿಗೆ ಅಭಿನಂದನೆ ಸಲ್ಲಿಸಿದರು.   

  ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನೀತಾ ಡಿಸೋಜ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂತಹ ಯಾವುದೇ ಚಟುವಟಿಕೆಗಳನ್ನು ಭಾಗವಹಿಸಿರಲಿಲ್ಲ. ಈ ಬಾರಿ ಆದರ್ಶ ಯುವಕ ಮಂಡಲದ ಸಂತೋಷ್ ಶೆಟ್ಟಿ ಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದರಿಂದ ಕೃಷಿಯ ಬಗ್ಗೆ ಏನೂ ಅರಿವು ಇಲ್ಲದ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಅನುಭವವನ್ನು ಹೆಚ್ಚಿಸಿಕೊಳ್ಳುವ ಮೂಲಕ ಕೃಷಿಕರಿಗೆ ಪ್ರೋತ್ಸಾಹ ನೀಡಿ ಎಂದರು.

 ಗದ್ದೆ ನೋಟ-ಕೃಷಿ ಪಾಠ ಕಾರ್ಯಕ್ರಮದಲ್ಲಿ ಕೆಸರುಗದ್ದೆಯಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

 ಕಾರ್ಯಕ್ರಮವನ್ನು ಆಯೋಜಿಸಿದ ಸಂತೋಷ್ ಶೆಟ್ಟಿ ಬರ್ಪಾಣಿ ಅವರು ಮಾತನಾಡಿ, ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸತತವಾಗಿ 11 ವರ್ಷಗಳಿಂದ ಗದ್ದೆ ನೋಟ ಕೃಷಿ ಪಾಠ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಅಂತೆಯೇ ಈ ಬಾರಿ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆಗಮಿಸಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದರು‌.

ಈ ಸಂದರ್ಭದಲ್ಲಿಆದರ್ಶ ಯುವಕ ಸಂಘದ ಕಾರ್ಯದರ್ಶಿ ಗಣೇಶ್, ಶಾಲೆಯ ದೈಹಿಕ ಶಿಕ್ಷಕರಾದ ಸತೀಶ್ ಅಂಚನ್, ಆದರ್ಶ ಯುವತಿ ಮಂಡಳದ ಅಧ್ಯಕ್ಷೆ ಸುಜಾತ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ ಮತ್ತು ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.