ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ
ಸಾವಿರಾರು ಭಕ್ತಾಧಿಗಳ ಉಪಸ್ಥಿತಿ
(Yermal) ಎರ್ಮಾಳು: ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ರಥೋತ್ಸವ ಶನಿವಾರ ವಿಜ್ರಂಭಣೆಯಿಂದ ಸಂಪನ್ನಗೊಂಡಿತು.
ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್ ರಾವ್, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು.
ಮಧ್ಯಾಹ್ನ ರಥಾರೋಹಣ ನೆರವೇರಿತು. ಬಳಿಕ ಶ್ರೀಮತಿ ಮತ್ತು ಶ್ರೀ ಸುರೇಶ್ ಗೋಪಾಲ ಶೆಟ್ಟಿಯವರ ವತಿಯಿಂದ ನಡೆದ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಮಹಾ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು, ಎರ್ಮಾಳು ಜನಾರ್ಧನ ಜನಕಲ್ಯಾಣ ಸಮಿತಿ ಅಧ್ಯಕ್ಷ ಸುರೇಶ್ ಜಿ ಶೆಟ್ಟಿ, ಪುಚ್ಚೊಟ್ಟು ಬೀಡು ಸೀತಾರಾಮ ಲೋಕಯ್ಯ ಶೆಟ್ಟಿ, ಯಶೋಧರ ಶೆಟ್ಟಿ ಬಗ್ಗೇಡಿ ಗುತ್ತು, ಉದಯ ಕೆ ಶೆಟ್ಟಿ ಎರ್ಮಾಳು, ಎರ್ಮಾಳು ಹರೀಶ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಜಗಜೀವನ್ ಚೌಟ, ಸಂತೋಷ್ ಶೆಟ್ಟಿ ಬರ್ಪಾಣಿ, ಕಿಶೋರ್ ಶೆಟ್ಟಿ, ಬರ್ಪಾಣಿ ಗಣೇಶ ಶೆಟ್ಟಿ, ಉಮಾನಾಥ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಜನಾರ್ಧನ ಜನಕಲ್ಯಾಣ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

