• Home  
  • ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ (Construction of a welcome tower at Kemundelu turn for the Sri Vishweshwara Temple in Yellur)
- ಧಾರ್ಮಿಕ

ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ (Construction of a welcome tower at Kemundelu turn for the Sri Vishweshwara Temple in Yellur)

Share: ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ  ಕೇಮುಂಡೇಲು  ಶ್ರೀ ಪಾಂಡುರಂಗ ಭಜನಾ ಮಂಡಳಿ  ಇದರ “ಷಷ್ಟ್ಯಬ್ದ“ ನೆನಪಿಗಾಗಿ ನಿರ್ಮಾಣ   (Yelluru) ಎಲ್ಲೂರು: ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯು, ಇದರ ಸ್ಥಾಪನೆಯ ಅರುವತ್ತಮೂರನೇ ವರ್ಷದ “ಷಷ್ಟ್ಯಬ್ದ” ದ  ಸವಿನೆನಪಿಗಾಗಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ನಿರ್ಮಿಸಲಾದ ಸ್ವಾಗತ ಗೋಪುರವನ್ನು ಅದಮಾರು ಮಠಾಧೀಶ  ಶ್ರೀ ಈಶಪ್ರಿಯ ತೀರ್ಥರು ಉದ್ಗಾಟಿಸಿದರು.  ಈ ಸಂದರ್ಭ ಅವರು ಮಾತನಾಡಿ, ಮನಃಕಾರಕನಾದ ರುದ್ರದೇವರ […]

  (Yelluru) ಎಲ್ಲೂರು: ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯು, ಇದರ ಸ್ಥಾಪನೆಯ ಅರುವತ್ತಮೂರನೇ ವರ್ಷದ “ಷಷ್ಟ್ಯಬ್ದ” ದ  ಸವಿನೆನಪಿಗಾಗಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ನಿರ್ಮಿಸಲಾದ ಸ್ವಾಗತ ಗೋಪುರವನ್ನು ಅದಮಾರು ಮಠಾಧೀಶ  ಶ್ರೀ ಈಶಪ್ರಿಯ ತೀರ್ಥರು ಉದ್ಗಾಟಿಸಿದರು.

 ಈ ಸಂದರ್ಭ ಅವರು ಮಾತನಾಡಿ, ಮನಃಕಾರಕನಾದ ರುದ್ರದೇವರ ಸನ್ನಿಧಿಗೆ ತೆರಳುವ ಪಥದಲ್ಲಿ ಪಾಂಡುರಂಗನ ಭಕ್ತರಿಂದ ನಿರ್ಮಾಣವಾದ ಸ್ವಾಗತ ಗೋಪುರವು ಒಂದು ಅಧ್ಯಾತ್ಮದ ಅಪೂರ್ವ ಸಂದೇಶವನ್ನು ಬಿತ್ತರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

 ಚಿತ್ರಾಪುರ ಮಠಾಧೀಶರಾದ ಶ್ರೀ ವಿದ್ಯೇಂದ್ರತೀರ್ಥರು ಆಶಿರ್ವಚನದಲ್ಲಿ ಭಜನಾಮಂಡಳಿಯ ಸದಸ್ಯರಿಗೆ ಶುಭ ಹಾರೈಸಿದರು.

 ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ,   ಎಲ್ಲೂರಿನ‌ ಮಹತೋಭಾರ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯನ್ನು ತಲುಪಲು ಹಲವು ದಾರಿಗಳಿದ್ದರೂ, ಈಗ ನಿರ್ಮಾಣವಾದ ಸ್ವಾಗತ ಗೋಪುರವು ಮೊದಲನೇಯದ್ದಾಗಿದೆ.  ಪಾಂಡುರಂಗ ಭಜನಾ ಮಂಡಳಿ ಸಾರ್ಥಕ ಕೆಲಸ ಮಾಡಿದೆ ಎಂದರು.

ಇದೇ ಸಂದರ್ಭ ಗೋಪುರ ನಿರ್ಮಾಣ ಕಾರ್ಯದಲ್ಲಿ ಭಾಗಿ ಆದವರನ್ನು ಅದಮಾರು ಮಠಾಧೀಶರು ಗೌರವಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್ಲೂರು ದೇವಳದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ವಹಿಸಿದ್ದರು.

  ಈ ಸಂದರ್ಭ ಕೇಮುಂಡೇಲು ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಪುತ್ತಿಗೆ ಮಠದ ದಿವಾನರಾಗಿದ್ದ ನಾಗರಾಜ ಆಚಾರ್ಯ, ಅದಮಾರು ಶಾಲಾ ನಿವೃತ್ತ ಪ್ರಾಂಶುಪಾಲ ಸುದರ್ಶನ್ ವೈ ಎಸ್, ಮುದರಂಗಡಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾ, ಕುಂಜೂರು ದೇವಳದ ಅರ್ಚಕ ಚಕ್ರಪಾಣಿ ಉಡುಪ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮೊಕ್ತೇಸರ ಅರುಣಾಕರ ಶೆಟ್ಟಿ, ಬಿಲ್ಲವ ಸಂಘ ಮುದರಂಗಡಿ ಇದರ ಅಧ್ಯಕ್ಷ  ಕರುಣಾಕರ ಪೂಜಾರಿ, ಪಡುಬಿದ್ರಿ ಯುವವಾಹಿನಿ  ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ, ಆದರ್ಶ ಯುವಕ ಮಂಡಲ ಅದಮಾರು ಅಧ್ಯಕ್ಷ ಸಂತೋಷ್ ಶೆಟ್ಟಿ ಬರ್ಪಾಣಿ‌, ಎಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ದಯಾನಂದ, ಎಲ್ಲೂರು ಗ್ರಾಪಂ ಸದಸ್ಯರಾದ ಯಶವಂತ ಶೆಟ್ಟಿ, ದಯಾನಂದ ಶೆಟ್ಟಿಗಾರ್, ಶ್ರೀಮತಿ ವಿಮಲ ದೇವಾಡಿಗ, ಕೇಮುಂಡೇಲು ಭಜನಾ ಮಂದಿರದ ಪ್ರಧಾನ ಅರ್ಚಕ ಶ್ರೀಪತಿ ಆಚಾರ್ಯ,  ಗುರುಗುಂಡಿ ಕೇಶವ ಆಚಾರ್ಯ, ವಿರೇಂದ್ರ ಹೆಗ್ಗಡೆ ದಳಂತ್ರೆ, ನಾಗೇಶ ಪಾಂಡ್ಯಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

  ಭಜನಾ ಮಂಡಳಿಯ ಕಾರ್ಯದರ್ಶಿ ಕೃಷ್ಣಾನಂದ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಕೋಟ್ಯಾನ್ ಉಳ್ಳೂರು ಕಾರ್ಯಕ್ರಮ ನಿರೂಪಿದರು. ರಾಘವೇಂದ್ರ ರಾವ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.