ಎಸ್‌ಕೆಪಿಎ ಕಾಪು ವಲಯದ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷ ಸಂತೋಷ್ ಕಾಪು, ಪ್ರ.ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಕೋಶಾಧಿಕಾರಿ ಕಿರಣ್ ಕಾಪು
(Kaup) ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಇದರ ಕಾಪು ವಲಯದ 2025-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾಪು ವಿಡಿಯೋ ಟಚ್ ಸ್ಟುಡಿಯೋ ಮಾಲಕ ಸಂತೋಷ್ ಕಾಪು, ಕಾರ್ಯದರ್ಶಿಯಾಗಿ ಪಾದೂರು ಪ್ರಕಾಶ್ ಫೊಟೋ ನ ಪ್ರಕಾಶ್ ಆಚಾರ್ಯ, ಕೋಶಾಧಿಕಾರಿ ಯಾಗಿ ಕಾಪು ಪೂರ್ವಿ ಫೊಟೋಗ್ರಾಫಿಯ ಕಿರಣ್ ಕಾಪು ಮತ್ತು ಗೌರವಾಧ್ಯಕ್ಷರಾಗಿ ಆಶೀರ್ವಾದ್ ಸುಡಿಯೋ ಉಚ್ಚಿಲದ ಬಾಲಕೃಷ್ಣ ಪೂಜಾರಿ ಉಚ್ಚಿಲ ಆಯ್ಕೆಯಾಗಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ಶ್ರೀ ಕೃಪಾ ಸ್ಟುಡಿಯೋ ಕಟಪಾಡಿಯ ಸಂತೋಷ್ ಶೆಟ್ಟಿಗಾರ್, ಪಲಿಮಾರು ಡ್ರೀಂ ಸ್ಟುಡಿಯೋದ ದೀಪಕ್ ಶೆಣೈ, ಜೊತೆ ಕಾರ್ಯದರ್ಶಿಯಾಗಿ ಸುಭಾಷ್ ನಗರ ಸುರಭಿ ಸ್ಟುಡಿಯೋದ ಕೆ. ಅಶೋಕ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಕಾಪು ಅನನ್ಯ ಸ್ಟುಡಿಯೋ ಪ್ರವೀಣ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೃಷ್ಠಿ ಸುಡಿಯೋ ಎರ್ಮಾಳು ಸತೀಶ್ ಎರ್ಮಾಳು, ಕ್ರೀಡಾ ಕಾರ್ಯದರ್ಶಿಯಾಗಿ ಕಾಪು ಸನ್ನಿಧಿ ಸ್ಟುಡಿಯೋ ಅನೀಶ್ ಮತ್ತು ಇನ್ನಾ ರಾಜೇಶ್ವರಿ ಸ್ಟುಡಿಯೋ ಉದಯ ಇನ್ನ, ಛಾಯಾ ಕಾರ್ಯದರ್ಶಿಯಾಗಿ ಅಲೆವೂರು ಸಂತೋಷ್ ಸ್ಟುಡಿಯೋ ಸಂತೋಷ್ ಅಲೆವೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯೋಗೀಶ್ ಕಾಂಚನ್, ಸುರೇಶ್ ಎರ್ಮಾಳು, ಪ್ರವೀಣ್, ರಾಜೇಶ್ ಕಟಪಾಡಿ, ರವಿರಾಜ ಶೆಟ್ಟಿ ಆಯ್ಕೆ ಆಗಿದ್ದಾರೆ.
ಜಿಲ್ಲಾ ಛಾಯಾ ಕಾರ್ಯದರ್ಶಿಯಾಗಿ ರಾಜೇಶ್ ಶಂಕರಪುರ, ಜಿಲ್ಲಾ ಸಮಿತಿ ಸದಸ್ಯರಾಗಿ ಕೃಷ್ಣ ರಾವ್, ಪ್ರಮೋದ್ ಸುವರ್ಣ, ಉದಯ ಮುಂಡ್ಕೂರು, ಸಚಿನ್ ಉಚ್ಚಿಲ ಆಯ್ಕೆ ಆದರು.
ಎಸ್‌ಕೆಪಿಎ ಸಹಕಾರಿ ಸಂಘದ ನಿರ್ದೇಶಕ ರವಿಕುಮಾರ್ ಕಟಪಾಡಿ, ಜಿಲ್ಲಾ ಕಟ್ಟಡ ಸಮಿತಿಯ ವಿನೋದ್ ಕಾಂಚನ್ ಕಾಪು, ವಲಯ ಸುರಕ್ಷಾ ನಿಧಿಯ ಪ್ರತಿನಿಧಿ ವೀರೇಂದ್ರ ಪೂಜಾರಿ ಶಿರ್ವ ಆಯ್ಕೆಯಾಗಿದ್ದಾರೆ.
ನಾಳೆ (ಡಿ. 23)ಪದ ಪ್ರದಾನ ಸಮಾರಂಭ:
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ. 23 ರಂದು ಸಂಜೆ ಕಾಪು ಕೆ 1 ಹೋಟೇಲು ಸಭಾಭವನದಲ್ಲಿ ನಡೆಯಲಿದೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನಿನ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ವ್ಯವಸಾಯಿಕಾ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು, ಉದ್ಯಮಿ ಪ್ರಭಾಕರ ಪೂಜಾರಿ, ಫೊಟೋ ಪ್ಯಾಲೇಸ್ ಮಾಲಕ ರವಿರಾಜ್ ಕಿದಿಯೂರು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಜಿಲ್ಲಾ ಸಂಚಾಲಕ ಗೋಪಾಲ ಸುಳ್ಯ, ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಎಸ್‌ಕೆಪಿಎ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ ವಾಸುದೇವ ರಾವ್ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಕಾಪು ವಲಯಾಧ್ಯಕ್ಷ ಸಂತೋಷ್ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

