• Home  
  • ಎಸ್.ಕೆ.ಪಿ.ಎ ಕಾಪು ವಲಯದ ವತಿಯಿಂದ ಕಾಪುವಿನ ಗೋಶಾಲೆಯಲ್ಲಿ ಗೋ ಪೂಜೆ, ಹಿಂಡಿ ವಿತರಣೆ (SKPA Kaup gow pooje)
- ಕರಾವಳಿ - ಪ್ರಚಲಿತ

ಎಸ್.ಕೆ.ಪಿ.ಎ ಕಾಪು ವಲಯದ ವತಿಯಿಂದ ಕಾಪುವಿನ ಗೋಶಾಲೆಯಲ್ಲಿ ಗೋ ಪೂಜೆ, ಹಿಂಡಿ ವಿತರಣೆ (SKPA Kaup gow pooje)

Share: ಎಸ್.ಕೆ.ಪಿ.ಎ ಕಾಪು ವಲಯದ ವತಿಯಿಂದ ಕಾಪುವಿನ ಗೋಶಾಲೆಯಲ್ಲಿ ಗೋ ಪೂಜೆ, ಹಿಂಡಿ ವಿತರಣೆ ಕಾಪು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಕಾಪು (South Kanara Photographers Association) ವಲಯದ ವತಿಯಿಂದ ದೀಪಾವಳಿ ಆಚರಣೆಯ ಪ್ರಯುಕ್ತ ಕಾಪು ಗೋ ಶಾಲೆ ಯಲ್ಲಿ ಗೋಪೂಜೆ ಮಾಡುವುದರ ಮೂಲಕ ಅರ್ಥಪೂರ್ಣ ದೀಪಾವಳಿ ಆಚರಿಸಿದರು. ಶ್ರೀ ಲಕ್ಷ್ಮಿ ಜನಾರ್ದನ ದೇವಳದ ಸಮೀಪದ ಗೋಶಾಲೆಗೆ ರವಿವಾರ ಎಸ್.ಕೆ.ಪಿ.ಎ ಸದಸ್ಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ, ಗೋಶಾಲೆಯ ಗೋಪಾಲಕೃಷ್ಣ ಮೂರ್ತಿ ಗೆ ಪೂಜೆಯನ್ನು ಸಲ್ಲಿಸಿದರು. […]

ಎಸ್.ಕೆ.ಪಿ.ಎ ಕಾಪು ವಲಯದ ವತಿಯಿಂದ ಕಾಪುವಿನ ಗೋಶಾಲೆಯಲ್ಲಿ ಗೋ ಪೂಜೆ, ಹಿಂಡಿ ವಿತರಣೆ

ಕಾಪು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಕಾಪು (South Kanara Photographers Association) ವಲಯದ ವತಿಯಿಂದ ದೀಪಾವಳಿ ಆಚರಣೆಯ ಪ್ರಯುಕ್ತ ಕಾಪು ಗೋ ಶಾಲೆ ಯಲ್ಲಿ ಗೋಪೂಜೆ ಮಾಡುವುದರ ಮೂಲಕ ಅರ್ಥಪೂರ್ಣ ದೀಪಾವಳಿ ಆಚರಿಸಿದರು.

ಶ್ರೀ ಲಕ್ಷ್ಮಿ ಜನಾರ್ದನ ದೇವಳದ ಸಮೀಪದ ಗೋಶಾಲೆಗೆ ರವಿವಾರ ಎಸ್.ಕೆ.ಪಿ.ಎ ಸದಸ್ಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ, ಗೋಶಾಲೆಯ ಗೋಪಾಲಕೃಷ್ಣ ಮೂರ್ತಿ ಗೆ ಪೂಜೆಯನ್ನು ಸಲ್ಲಿಸಿದರು. ಗೋವುಗಳಿಗೆ ಹಿಂಡಿ, ಫಲ, ದವಸ ಧಾನ್ಯ ಗಳನ್ನು ತಿನ್ನಿಸಿದರು.

ಮಹಿಳೆಯರು ಹಾಗೂ ಮಕ್ಕಳು ಈ  ಕಾರ್ಯ ಕ್ರಮದಲ್ಲಿ ಅತ್ಯುತ್ಸಾಹ ದಿಂದ ಭಾಗವಹಿಸಿ ಸಂತೋಷ ಪಟ್ಟರು. ಪುಟ್ಟ ಮಕ್ಕಳು ಪುಟ್ಟ ಪುಟ್ಟ ರಾಸುಗಳೊಡನೆ ಆಟ ಆಡಿ ಸಂಭ್ರಮದಿಂದ ಕುಣಿದಾಡಿದರು.

ಸುಮಂಗಲೆಯರು ಗೋಮಾತೆಗೆ ಅರಿಶಿನ ಕುಂಕುಮ ಹಚ್ಚಿ ಹೂ ಹಾರ ಹಾಕಿ ಆರತಿ ಬೆಳಗಿಸಿದರು.

ಈ ಸಂದರ್ಭದಲ್ಲಿ ಕಾಪು ವಲಯದ ಅಧ್ಯಕ್ಷ ಸಚಿನ್ ಉಚ್ಚಿಲ, ಗೌರವಾಧ್ಯಕ್ಷ ಕರುಣಾಕರ ನಾಯಕ್‌, ಕಾರ್ಯದರ್ಶಿ ರಾಘವೇಂದ್ರ ಭಟ್‌, ಉಪಾಧ್ಯಕ್ಷ ಸಂತೋಷ್‌ ಕಾಪು, ಸತೀಶ್‌ ಅದಮಾರು, ಪೂರ್ವಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ಐತಾಳ್‌, ಅನಂತರಾಜ್‌ ಭಟ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ  ಕೃಷ್ಣ ರಾವ್‌  ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.