• Home  
  • BIG BREAKING ಮಲ್ಪೆ ಸಮೀಪದ ನೇಜಾರಿನ ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆ – ದರೋಡೆಗೆ ಬಂದವರ ಕೃತ್ಯ ಶಂಕೆ!(4 Persons Murder At Malape – Nejaru
- ಅಪರಾಧ - ವಿಡಿಯೋ

BIG BREAKING ಮಲ್ಪೆ ಸಮೀಪದ ನೇಜಾರಿನ ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆ – ದರೋಡೆಗೆ ಬಂದವರ ಕೃತ್ಯ ಶಂಕೆ!(4 Persons Murder At Malape – Nejaru

Share: ಮಲ್ಪೆ ಸಮೀಪದ ನೇಜಾರಿನ ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆ – ದರೋಡೆಗೆ ಬಂದವರ ಕೃತ್ಯ ಶಂಕೆ! ಸಿಸಿ ಟಿವಿ ದೃಷ್ಯಾವಳಿ ಹಾಕುತ್ತಿರುವ ಪೊಲೀಸರು (Malape, Nejaru) ನೇಜಾರು : ಉಡುಪಿಯ ನೇಜಾರುವಿನ ತೃಪ್ತಿ ನಗರದಲ್ಲಿ ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆ ಹಿಂದೆ ದರೋಡೆ ಕೃತ್ಯದ ಶಂಕೆ ವ್ಯಕ್ತವಾಗಿದೆ. ದೀಪಾವಳಿ ಹಬ್ಬದ ದಿನ ಈ ಸುದ್ದಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ಮನೆಗೆ ನುಗ್ಗಿ ತಾಯಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಈ ಮನೆಯ ಯಜಮಾನ […]

udupi 4 persons murder udupi SP ARUNKUMAR, MLA Yashpal Suvarna Statement

ಮಲ್ಪೆ ಸಮೀಪದ ನೇಜಾರಿನ ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆದರೋಡೆಗೆ ಬಂದವರ ಕೃತ್ಯ ಶಂಕೆ!

ಸಿಸಿ ಟಿವಿ ದೃಷ್ಯಾವಳಿ ಹಾಕುತ್ತಿರುವ ಪೊಲೀಸರು

(Malape, Nejaru) ನೇಜಾರು : ಉಡುಪಿಯ ನೇಜಾರುವಿನ ತೃಪ್ತಿ ನಗರದಲ್ಲಿ ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆ ಹಿಂದೆ ದರೋಡೆ ಕೃತ್ಯದ ಶಂಕೆ ವ್ಯಕ್ತವಾಗಿದೆ.

ದೀಪಾವಳಿ ಹಬ್ಬದ ದಿನ ಈ ಸುದ್ದಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ.

ಮನೆಗೆ ನುಗ್ಗಿ ತಾಯಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಈ ಮನೆಯ ಯಜಮಾನ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.

ಮನೆಯಲ್ಲಿದ್ದ ಮೂವರು ಮಕ್ಕಳು ಮತ್ತು ತಾಯಿಯನ್ನು ಚೂರಿಯಲ್ಲಿ ಇರಿದು ಕೊಲೆಗೈಯಲಾಗಿದೆ. ಹಸೀನಾ (46),

ಅಫ್ನಾನ್ (23),ಅಯ್ನಾಝ್ (21), ಆಸಿಂ (12) ಕೊಲೆಗೀಡಾದವರು.

ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

 + ಸಂತೆಕಟ್ಟೆ ಸ್ಟಾಂಡ್ ನಲ್ಲಿ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾ ಚಾಲಕ ಶ್ಯಾಮ್ ನ ರಿಕ್ಷಾದಲ್ಲಿ ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ಬಂದಿದ್ದ ಆರೋಪಿ .

+ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ ಆರೋಪಿ.

 + ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದ.

+ ದೃಢಕಾಯ 45 ಆಸು ಪಾಸು ವಯಸ್ಸು

+ ಬ್ರೌನ್ ಕಲರ್ ಅಂಗಿ ಧರಿಸಿದ್ದು, ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ.

+ ಮನೆಯಲ್ಲಿ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದ.

+ ಗಡಿಬಿಡಿ ಅಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದ.

+ ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ರಕ್ಷಣಾ ಸ್ಟಾಂಡ್ ತಲುಪಿದ್ದ ಆರೋಪಿ.

+ ಆರೋಪಿ ಬೆಂಗಳೂರು ಕನ್ನಡ ಮಾತನಾಡುತ್ತಿದ್ದ

+ ಮನೆಯವರ ಪರಿಚಯದವನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ.

ಉಡುಪಿ ಎಸ್ಪಿ ಡಾ. ಅರುಣ್ (UDUPI SP DR Arunkumar) ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಹೇಳಿಕೆ ನೀಡಿದ್ದಾರೆ.

 ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ ಮಾಡಲಾಗಿದೆ. ಇನ್ನೊಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 ತಾಯಿ ಹಸೀನಾ ಮತ್ತವರ ಮೂವರು ಮಕ್ಕಳನ್ನು ಕೊಲೆ ಮಾಡಲಾಗಿದೆ. ನಾವು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದೇವೆ. ತನಿಖೆ ಮಾಡಿ ಶೀಘ್ರ ಇದರ ಹಿಂದಿನ‌ ಕಾರಣ ಪತ್ತೆ ಹಚ್ಚುತ್ತೇವೆ.

ಮನೆಯೊಳಗೆ ಯಾವುದೇ ಸೊತ್ತುಗಳು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ.ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ನಮಗೆ ಮಾಹಿತಿ ಬಂತು. ಮಾಹಿತಿ ಬಂದ ತಕ್ಷಣ ಬಂದು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದೇವೆ.

 ಕೊಲೆಗೆ ಏನು ಕಾರಣ ಎಂದು ಈಗ ತಿಳಿದು ಬಂದಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ ಆದಷ್ಟು ಶೀಘ್ರವಾಗಿ ಆರೋಪಿಯ ಪತ್ತೆ ಹಚ್ಚುತ್ತೇವೆ ಎಂದರು.

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.