• Home  
  • ಕಟಪಾಡಿಯ ಪೇಟೆಬೆಟ್ಟು ಕೊರಗಜ್ಜ ಸನ್ನಿಧಿಯಲ್ಲಿ  ಬಂದರ್ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ  ಚಾಲನೆ
- ಮನೋರಂಜನೆ

ಕಟಪಾಡಿಯ ಪೇಟೆಬೆಟ್ಟು ಕೊರಗಜ್ಜ ಸನ್ನಿಧಿಯಲ್ಲಿ  ಬಂದರ್ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ  ಚಾಲನೆ

Share: ಕಟಪಾಡಿಯ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ  ಬಂದರ್ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಸೋಮವಾರ ಬೆಳಿಗ್ಗೆ   ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಕ್ಲಾಪ್ ಮಾಡುವ ಮೂಲಕ ಚಾಲನೆಯನ್ನು ನೀಡಿ ಶುಭವನ್ನು ಹಾರೈಸಿದರು.  ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯ ಮುಖ್ಯಸ್ಥ ತುಕಾರಾಮ ಎಸ್ ಉರ್ವ ಪೂಜೆಯನ್ನು ನಡೆಸಿದ್ದು, ಸ್ವರ್ಣೋದ್ಯಮಿ, ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಬ್ಯಾನರ್ ಅನಾವರಣಗೊಳಿಸಿದರು.  ಈ ಸಂದರ್ಭ ಗೀತಾಂಜಲಿ ಸುವರ್ಣ ಮಾತನಾಡಿ, ಚಿತ್ರ ನಿರ್ಮಾಣ […]

ಕಟಪಾಡಿಯ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ  ಬಂದರ್ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಸೋಮವಾರ ಬೆಳಿಗ್ಗೆ   ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಕ್ಲಾಪ್ ಮಾಡುವ ಮೂಲಕ ಚಾಲನೆಯನ್ನು ನೀಡಿ ಶುಭವನ್ನು ಹಾರೈಸಿದರು.

 ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯ ಮುಖ್ಯಸ್ಥ ತುಕಾರಾಮ ಎಸ್ ಉರ್ವ ಪೂಜೆಯನ್ನು ನಡೆಸಿದ್ದು,

ಸ್ವರ್ಣೋದ್ಯಮಿ, ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಬ್ಯಾನರ್ ಅನಾವರಣಗೊಳಿಸಿದರು.

 ಈ ಸಂದರ್ಭ ಗೀತಾಂಜಲಿ ಸುವರ್ಣ ಮಾತನಾಡಿ, ಚಿತ್ರ ನಿರ್ಮಾಣ ತಂಡದಲ್ಲಿ ಯುವಕರ ತಂಡವೇ ಇದ್ದು, ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿದಲ್ಲಿ ಫಲ ಖಂಡಿತ ಸಿಗುತ್ತದೆ ಎಂದರು.

ಚಿತ್ರ ನಿರ್ಮಾಣಕ್ಕೂ ಒಂದು ಗ್ರಾಮರ್‌ ಇದೆ. ಚಿತ್ರವನ್ನು ಜವಬ್ದಾರಿಯುತವಾಗಿ ನಿರ್ಮಿಸಿ. ಈ ಚಿತ್ರ ಎಲ್ಲರಿಗೂ ಬ್ರೇಕ್‌ ತ್ರೂ ಆಗಲಿ ಎಂದು ರಂಗಭೂಮಿ, ಸಿನಿಮಾ ನಿರ್ದೇಶಕ ಬಾಸುಮ ಕೊಡಗು ಹಾರೈಸಿದರು.

ಈ ಸಂದರ್ಭ ನಾಯಕ ನಟ ಪ್ರದೀಪ್ ಆಚಾರ್ಯ, ನಟಿ ನಿಕಿತಾ ಮಾಳಿ, ನಿರ್ಮಾಪಕ ರಮೇಶ್ ಎನ್.ಕೆ. ನಿರ್ದೇಶಕ ಚೆನ್ನಬಸವ್ ಜಿ., ಕಾಪು ಪೊಲೀಸ್ ಠಾಣೆ ಎ.ಎಸ್.ಐ ದಯಾನಂದ್,  ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಎಸ್. ಆಚಾರ್ಯ, ಕಾಪು ಬ್ಲಾಕ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಸುನಿಲ್ ಡಿ.ಬಂಗೇರ, ಕಟಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರೇಮ್ ಕುಮಾರ್, ಕಾಪು ಕಾಳಿಕಾಂಬಾ ದೇಗುಲದ ಮಾಜಿ ೨ನೇ ಮೊಕ್ತೇಸರ ಡಿಂಡಿಬೆಟ್ಟು ಗಂಗಾಧರ ಆಚಾರ್ಯ, ಚಲನಚಿತ್ರ ನಟರಾದ ಚಂದ್ರಕಲಾ ರಾವ್, ಪ್ರಭಾಕರ ಕುಂದರ್, ಬಿ.ಸಿ. ರಾಜೇಶ್ ಆಚಾರ್ಯ, ಜಯಕರ್ ಕುಂದರ್, ಚಲನಚಿತ್ರ ನಟ, ನಟಿಯರು ಪಾಲ್ಗೊಂಡಿದ್ದರು.

ಪತ್ರಕರ್ತ ಪ್ರಕಾಶ್ ಸುವರ್ಣ ಸ್ವಾಗತಿಸಿದರು. ಚಿತ್ರನಟ ನಾಗೇಶ್ ಕಾಮತ್ ವಂದಿಸಿದರು.

ಮನೋಜ್ ಅಮೀನ್ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.