• Home  
  • ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ, ಶ್ರೀ ಸಾಯಿ ಈಶ್ವರ್ ಗುರೂಜಿ ಜನ್ಮದಿನಾಚರಣೆ (Shankarpura: Street dog protection day, Sri Sai Eshwar Guruji Birthday Celebration)
- social service

ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ, ಶ್ರೀ ಸಾಯಿ ಈಶ್ವರ್ ಗುರೂಜಿ ಜನ್ಮದಿನಾಚರಣೆ (Shankarpura: Street dog protection day, Sri Sai Eshwar Guruji Birthday Celebration)

Share: ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ, ಶ್ರೀ ಸಾಯಿ ಈಶ್ವರ್ ಗುರೂಜಿ ಜನ್ಮದಿನಾಚರಣೆ (Shankarapura) ಶಂಕರಪುರ : ಮನುಷ್ಯರು ಪ್ರಾಮಾಣಿಕರಾಗಿ ಪ್ರಾಣಿ ಪಕ್ಷಿಗಳ ಸೇವೆಯ ಮೂಲಕ ಮಾನವೀಯತೆ, ಮನುಷ್ಯತ್ವದ ಮೌಲ್ಯವನ್ನು ಎತ್ತಿ ಹಿಡಿಯುತ್ತಾರೋ ಅದು ಭಗವಂತನ ಸೇವೆ. ಆ ನಿಟ್ಟಿನಲ್ಲಿ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಯು ಮಹತ್ವವನ್ನು ಪಡೆದುಕೊಳ್ಳಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕಜಾತಿ ಧರ್ಮ ಪೀಠದ ಪೀಠಾಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು. ಅವರು ನ.12ರಂದು ಶ್ರೀ […]

ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ, ಶ್ರೀ ಸಾಯಿ ಈಶ್ವರ್ ಗುರೂಜಿ ಜನ್ಮದಿನಾಚರಣೆ

(Shankarapura) ಶಂಕರಪುರ : ಮನುಷ್ಯರು ಪ್ರಾಮಾಣಿಕರಾಗಿ ಪ್ರಾಣಿ ಪಕ್ಷಿಗಳ ಸೇವೆಯ ಮೂಲಕ ಮಾನವೀಯತೆ, ಮನುಷ್ಯತ್ವದ ಮೌಲ್ಯವನ್ನು ಎತ್ತಿ ಹಿಡಿಯುತ್ತಾರೋ ಅದು ಭಗವಂತನ ಸೇವೆ. ಆ ನಿಟ್ಟಿನಲ್ಲಿ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಯು ಮಹತ್ವವನ್ನು ಪಡೆದುಕೊಳ್ಳಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕಜಾತಿ ಧರ್ಮ ಪೀಠದ ಪೀಠಾಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು.

ಅವರು ನ.12ರಂದು ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿಮುಖ್ಯಪ್ರಾಣ ಕಾಲಭೈರವ ಸ್ವಾಮಿ ದೇವಸ್ಥಾನದಲ್ಲಿ ನಡೆದ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಯನ್ನು ದೀಪ ಬೆಳಗಿಸಿ, ಲಾಂಛನ ಬಿಡುಗಡೆಗೊಳಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದರು.

ಇದೇ ದಿನ ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕಜಾತಿ ಧರ್ಮ ಪೀಠದ ಪೀಠಾಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಜನ್ಮ ದಿನಾಚರಣೆಯನ್ನುಶ್ವಾನ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸಲಾಯಿತು.

 ಪಶು ಸಂಗೋಪನಾ ಇಲಾಖೆಯ ನಿವೃತ್ತ ಅಧಿಕಾರಿ ಬಿ. ರವೀಂದ್ರ ಹೆಬ್ಬಾರ್ ಬ್ರಹ್ಮಾವರ ಮಾತನಾಡಿ, ಗುರೂಜಿ ಅವರ ಪ್ರಾಣಿ ಪಕ್ಷಿಗಳ ಮೋಕ್ಷ ಸಂಕಲ್ಪದ ಜತೆಗೆ ಬೀದಿ ಶ್ವಾನ ಸಂರಕ್ಷಣೆಯ ಚಿಂತನೆಯು ಶ್ಲಾಘನೀಯ. ಸಮಾಜವು ಪೂರಕವಾಗಿ ಸ್ಪಂದಿಸಬೇಕಿದೆ ಎಂದರು.

ಸಮಾರಂಭದಲ್ಲಿ ಹೃದಯವಂತ ಪ್ರಾಣಿ ಪ್ರಿಯರಾದ ಸಾಲಿಗ್ರಾಮ ಪ್ರಾಣಿ ರಕ್ಷಣಾ ಕೆಂದ್ರದ ಸುಧೀಂದ್ರ ಐತಾಳ್, ಕಾಪು ಪ್ರಶಾಂತ್ ಪೂಜಾರಿ, ಬಿ. ರವೀಂದ್ರ ಹೆಬ್ಬಾರ್ ಬ್ರಹ್ಮಾವರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಹೊಸಬೆಳಕು ಆಶ್ರಮದ ತನುಲಾ, ದ್ವಾರಕಾಮಾಯಿ ಮಠದ ಟ್ರಸ್ಟಿ ಗೀತಾಂಜಲಿ ಎಂ. ಸುವರ್ಣ, ಗಣ್ಯರಾದ ವೀಣಾ ಎಸ್. ಶೆಟ್ಟಿ, ರಘುರಾಮ ಶೆಟ್ಟಿ ಕಾಪು, ವಿಕ್ಕಿ ಪೂಜಾರಿ ಮಡಂಬು, ನವೀನ್, ರಾಘವೇಂದ್ರ ಪ್ರಭು, ಗುರೂಜಿ ಆಪ್ತ ಸಹಾಯಕ ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ಅರ್ಚಕ ಶ್ರೀನಿವಾಸ ಉಡುಪ ಉಪಸ್ಥಿತರಿದ್ದರು.

ದಾಮೋದರ ಶರ್ಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.