• Home  
  • ಕಾಂಗ್ರೆಸ್ ಆಡಳಿತವು ಕಾನೂನು ಚೌಕಟ್ಟನ್ನು ಮೀರುವುದಿಲ್ಲ: ಉಚ್ಚಿಲದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
- ಕರಾವಳಿ

ಕಾಂಗ್ರೆಸ್ ಆಡಳಿತವು ಕಾನೂನು ಚೌಕಟ್ಟನ್ನು ಮೀರುವುದಿಲ್ಲ: ಉಚ್ಚಿಲದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Share:  ಭಾರತವು ಸಂವಿಧಾನದತ್ತವಾದ ಧರ್ಮ ನಿರಪೇಕ್ಷ  ದೇಶವಾಗಿದೆ.  ಯಾವುದೇ ಸರಕಾರವಾಗಲೀ ಸಂವಿಧಾನದ ಚೌಕಟ್ಟಿನೊಳಗೇ ಧರ್ಮ ನಿರಪೇಕ್ಷವಾಗಿಯೇ ಅನೇಕ ಕಾನೂನುಗಳನ್ನು ಜಾರಿಗೊಳಿಸಿರುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ  ಲಕ್ಷ್ಮೀ ಹೆಬ್ಬಾಳ್ಕರ್ ಉಚ್ಚಿಲದಲ್ಲಿ ಪತ್ರರ‍್ತರೊಂದಿಗೆ ಮಾತನಾಡಿದರು.  ಕಾಂಗ್ರೆಸ್‌ ಪಕ್ಷವು ಕಾನೂನಿನ ಚೌಕಟ್ಟಿನಡಿಯಲ್ಲಿ ಸಂವಿಧಾನಕ್ಕೆ ಬಹಳಷ್ಟು ಮರ್ಯಾದೆಯನ್ನು ಕೊಟ್ಟು ಆಡಳಿತವನ್ನು ನಡೆಸುತ್ತದೆ. ಜನರಲ್ಲಿ ಅಂತಹಾ ಗ್ರಹಿಕೆಗಳಿದ್ದರೆ ಅದು ತಪ್ಪು ಎಂದರು.  ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿನ ಸಿಬಂದಿಗಳ ಕೊರತೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಸಿಬಂದಿ ಕೊರತೆ […]

 ಭಾರತವು ಸಂವಿಧಾನದತ್ತವಾದ ಧರ್ಮ ನಿರಪೇಕ್ಷ  ದೇಶವಾಗಿದೆ.  ಯಾವುದೇ ಸರಕಾರವಾಗಲೀ ಸಂವಿಧಾನದ ಚೌಕಟ್ಟಿನೊಳಗೇ ಧರ್ಮ ನಿರಪೇಕ್ಷವಾಗಿಯೇ ಅನೇಕ ಕಾನೂನುಗಳನ್ನು ಜಾರಿಗೊಳಿಸಿರುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ  ಲಕ್ಷ್ಮೀ ಹೆಬ್ಬಾಳ್ಕರ್ ಉಚ್ಚಿಲದಲ್ಲಿ ಪತ್ರರ‍್ತರೊಂದಿಗೆ ಮಾತನಾಡಿದರು.

 ಕಾಂಗ್ರೆಸ್‌ ಪಕ್ಷವು ಕಾನೂನಿನ ಚೌಕಟ್ಟಿನಡಿಯಲ್ಲಿ ಸಂವಿಧಾನಕ್ಕೆ ಬಹಳಷ್ಟು ಮರ್ಯಾದೆಯನ್ನು ಕೊಟ್ಟು ಆಡಳಿತವನ್ನು ನಡೆಸುತ್ತದೆ. ಜನರಲ್ಲಿ ಅಂತಹಾ ಗ್ರಹಿಕೆಗಳಿದ್ದರೆ ಅದು ತಪ್ಪು ಎಂದರು.

 ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿನ ಸಿಬಂದಿಗಳ ಕೊರತೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಸಿಬಂದಿ ಕೊರತೆ ಎಲ್ಲಾ ಇಲಾಖೆಗಳಂತೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲೂ ಇದೆ. ಅದನ್ನು ಮುಂದಿನ ದಿನಗಳಲ್ಲಿ ನೀಗಿಸುವ ಪ್ರಯತ್ನಗಳನ್ನು ನಡೆಸಲಾಗುವುದೆಂದು  ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಈ ಸಂದರ್ಭ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.