ಕಾಂತಾರಾ 1 ಚಿತ್ರಕ್ಕೂ, ಚಿತ್ರ ನಟ ರಾಕೇಶ್ ಪೂಜಾರಿ ಸಾವಿಗೂ ಸಂಬಂಧ ಕಲ್ಪಿಸುತ್ತಿರುವ ಜನರು
(Udipi) ಉಡುಪಿ: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1′ ಚಿತ್ರಕ್ಕೂ ರಿಯಾಲಿಟಿ ಶೋ ಮತ್ತು ಕನ್ನಡ, ತುಳು ಸಿನೆಮಾ ನಟ ಉಡುಪಿಯ ರಾಕೇಶ್ ಪೂಜಾರಿ ಸಾವಿಗೂ ಸಂಬಂಧವನ್ನು ಜನರು ಥಳಕು ಹಾಕುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ರಿಯಾಲಿಟಿ ಷೋ ಮೂಲಕ ಮನೆಮಾತಾಗಿದ್ದ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಭಾನುವಾರ ರಾತ್ರಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು ಕಾಂತಾರಾ 1 ಚಿತ್ರಕ್ಕಾಗಿ ನಡೆದ ಚಿತ್ರೀಕರಣದಲ್ಲಿ ರಾಕೇಶ್ ಪೂಜಾರಿ ಭಾಗಿಯಾಗಿ, ಸಣ್ಣ ಪಾತ್ರವನ್ನು ಪೂರ್ಣಗೊಳಿಸಿದ್ದಾರೆ.
ಕಾಂತಾರ ಚಿತ್ರ ತಂಡ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತೀಕರಣ ಪ್ರಾರಂಭ ಶೂಟಿಂಗ್ ಆರಂಭವಾದಾಗಿನಿಂದ ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸಿದೆ, ಎದುರಿಸುತ್ತಿದೆ. ಇದಕ್ಕಾಗಿ ಚಿತ್ರತಂಡ ದೈವದ ಮೊರೆ ಹೋಗಿದ್ದು, ದೈವವೂ ಅಭಯ ನೀಡಿದೆ ಎನ್ನಲಾಗಿದೆ.
ಆದರೂ ಒಂದರ ಹಿಂದೆ ಮತ್ತೊಂದು ಎಂಬಂತೆ ದುರಂತ ನಡೆಯುತ್ತಲಿದೆ.
ಮಿನಿ ಬಸ್ ದುರಂತ:
ಕಳೆದ ನವೆಂಬರ್‌ನಲ್ಲಿ ಚಿತ್ರೀಕರಣ ಮುಗಿಸಿ ಮಿನಿ ಬಸ್‌ನಲ್ಲಿ ತೆರಳುತ್ತಿದ್ದ 20 ಜೂನಿಯರ್ ಕಲಾವಿದರಿದ್ದ ತಂಡ ಬೈಂದೂರಿನ ಜಡ್ಕಲ್ ಬಳಿ ಅವಘಾತಕ್ಕೀಡಾಗಿತ್ತು. ಮಿನಿ ಬಸ್‌ನಲ್ಲಿದ್ದ ಹಲವಾರು ಸಹ ನಟರಿಗೆ ಗಾಯವಾಗಿತ್ತು.
ಹಾಸನದಲ್ಲಿ ಅರಣ್ಯ ನಾಶ ಆರೋಪ :
ಕಳೆದ ಜನವರಿ ತಿಂಗಳಲ್ಲಿ ಸಕಲೇಶಪುರ ತಾಲೂಕಿನಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣ ನಡೆಸುತ್ತಿದ್ದಾಗ ಅರಣದಲ್ಲಿ ಸ್ಪೋಟಕ ಬಳಕೆ ಮತ್ತು ಅರಣ್ಯ ನಾಶದ ಆರೋಪ ಬಂದಿತ್ತು. ಇದೂ ತಣ್ಣಗಾಗಿದೆ.
ಕೊಲ್ಲೂರಿನಲ್ಲಿ ಕಲಾವಿದ ನೀರಿನಲ್ಲಿ ಮುಳುಗಿ ಸಾವು
ಇದೇ ತಿಂಗಳಲ್ಲಿ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ತೆರಳಿದ್ದ ಈ ಸಿನಿಮಾದ ಸಹಕಲಾವಿದ ಕೇರಳ ಮೂಲದ ಎಂ. ಎಫ್. ಕಪಿಲ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು.
ಹಲವಾರು ಸಣ್ಣ ಪುಟ್ಟ ಘಟನೆಗಳು ಸಂಭವಿಸಿದ್ದರೂ, ಕೆಲವೊಂದು ಮುಚ್ಚಿಹೋಗಿದೆ ಎನ್ನುತ್ತಾರೆ ಸ್ಥಳೀಯರು.
ಅದಾಗ್ಯೂ ‘ಕಾಂತಾರ’ದಿಂದ ಈ ದುರಂತಗಳಾಗಿಲ್ಲ. ಸಹ ನಟ ಮೃತ ಪಟ್ಟಿದ್ದಕ್ಕೂ ಎಂದು ಸಿನಿಮಾ ತಂಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಂಡ ಹೇಳಿಕೊಂಡಿದೆ.
ಆದರೂ ಇನ್ನಷ್ಟು ಕಾಲ ಜನರಲ್ಲಿ ಸಂಶಯ ಕಾಡುವುದು ಖಂಡಿತ.

