• Home  
  • ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕ ಕಾಲಕ್ಕೆ ಮಾರಿ ಪೂಜೆ ಸಂಪನ್ನ(At Kaup Hosa, Hale & Kalya mari gudi Jarde maari pooja celebration)
- ಧಾರ್ಮಿಕ - ವಿಡಿಯೋ

ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕ ಕಾಲಕ್ಕೆ ಮಾರಿ ಪೂಜೆ ಸಂಪನ್ನ(At Kaup Hosa, Hale & Kalya mari gudi Jarde maari pooja celebration)

Share: ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕ ಕಾಲಕ್ಕೆ ತುಳುವರ  ಆಟಿ ಮಾರಿ ಪೂಜೆ ಸಂಪನ್ನ ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಯಮ್ಮ ದೇವಸ್ಥಾನ ಹಾಗೂ ಕಲ್ಯ ಮಾರಿಯಮ್ಮ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ತುಳುವರ ಆಟಿ (ಆಷಾಡ) ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.  ಸಿಡುಬು, ಸಂತಾನ ಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ […]

ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕ ಕಾಲಕ್ಕೆ ತುಳುವರ  ಆಟಿ ಮಾರಿ ಪೂಜೆ ಸಂಪನ್ನ

ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಯಮ್ಮ ದೇವಸ್ಥಾನ ಹಾಗೂ ಕಲ್ಯ ಮಾರಿಯಮ್ಮ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ತುಳುವರ ಆಟಿ (ಆಷಾಡ) ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.

 ಸಿಡುಬು, ಸಂತಾನ ಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿ ಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ತಿಂಗಳ ಮಾರಿ ಪೂಜೆ ನಡೆಯುತ್ತದೆ.

ಸುಗ್ಗಿ ಹಾಗೂ ಆಷಾಡ ತಿಂಗಳ ಮಾರಿಪೂಜೆಯಲ್ಲಿ ಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿಗುಡಿಗಳಿಗೆ ಆಗಮಿಸುತ್ತಿದ್ದು, ಜಾರ್ದೆ ಮಾರಿಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಆದರೂ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತದೆ. 

 ಕಾಪು ಮಾರಿಪೂಜೆಯಲ್ಲಿ ಕುರಿ ಹಾಗೂ ಕೋಳಿಗಳ ಬಲಿ ನಡೆಯುತ್ತದೆ. ಸರಕಾರ ಬಲಿ ನೀಡದಂತೆ ತಡೆ ನೀಡಿದ್ದರೂ, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಕೋಳಿಗಳನ್ನು ತಂದು ಕಡಿದು ತಮ್ಮ ಮನೆಗಳಿಗೆ ಕೊಂಡೊಯ್ಯತ್ತಾರೆ. ಪ್ರತಿ ಮಾರಿಪೂಜೆಗಳಲ್ಲಿ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದು ಇಲ್ಲಿಯ ವಿಶೇಷಗಳಲ್ಲೊಂದು.

Leave a comment

Your email address will not be published. Required fields are marked *

eMedia Kannada  @2025. All Rights Reserved.