• Home  
  • ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ (Rotary Udupi donates inverter ti neelavara Sumedha special Childrens School)
- social service - ಶಾಲಾ ಕಾಲೇಜು

ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ (Rotary Udupi donates inverter ti neelavara Sumedha special Childrens School)

Share: ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ (Udupi)ಉಡುಪಿ: ರೋಟರಿ ಕ್ಲಬ್‌ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್  ಕೊಡುಗೆ ನೀಡಿದ್ದು, ಅದರ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು.  ಇನ್ವರ್ಟರ್  ಪ್ರಾಯೋಜಕರಾದ ಶ್ರೀಯುತ ಕಮಲಾಕರ ನಾಯಕರು ಕೊಡುಗೆಯ ಹಸ್ತಾಂತರ ನೆರವೇರಿಸಿ ಇಂತಹ ಉಪಯುಕ್ತ ಸಾದನವನ್ನು ನೀಡುವರೇ ಬಹಳ ಸಂತೋಷ ವಾಗಿದೆಯೆಂದು ಹೇಳಿ, ರೋಟರಿ ಈ ಸೇವಾಕಾರ್ಯಕ್ಕೆ ಅಭಿನಂದಿಸಿದರು. ಡಾ. ಪಿ.ವಿ. ಭಂಡಾರಿ ಮತ್ತು ಡಾ. ಎ.ವಿ.ಬಾಳಿಗ ಆಸ್ಪತ್ರೆಯ ತಜ್ಞ […]

ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ

(Udupi)ಉಡುಪಿ: ರೋಟರಿ ಕ್ಲಬ್‌ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್  ಕೊಡುಗೆ ನೀಡಿದ್ದು, ಅದರ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು.

 ಇನ್ವರ್ಟರ್  ಪ್ರಾಯೋಜಕರಾದ ಶ್ರೀಯುತ ಕಮಲಾಕರ ನಾಯಕರು ಕೊಡುಗೆಯ ಹಸ್ತಾಂತರ ನೆರವೇರಿಸಿ ಇಂತಹ ಉಪಯುಕ್ತ ಸಾದನವನ್ನು ನೀಡುವರೇ ಬಹಳ ಸಂತೋಷ ವಾಗಿದೆಯೆಂದು ಹೇಳಿ, ರೋಟರಿ ಈ ಸೇವಾಕಾರ್ಯಕ್ಕೆ ಅಭಿನಂದಿಸಿದರು.

ಡಾ. ಪಿ.ವಿ. ಭಂಡಾರಿ ಮತ್ತು ಡಾ. ಎ.ವಿ.ಬಾಳಿಗ ಆಸ್ಪತ್ರೆಯ ತಜ್ಞ ರಿಂದ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ನಡೆಸಲಾಯಿತು.

ಡಾ. ಪಿ.ವಿ.ಭಂಡಾರಿಯವರು ಮಕ್ಕಳ ಹೆತ್ತವರಿಗೆ ಉಪಯುಕ್ತ ಸಲಹೆ ಮತ್ತು ವಿಶೇಷ ಮಕ್ಕಳ ಆರೋಗ್ಯದ ಬಗ್ಗೆ ಸಮಾಲೋಚನೆ ನಡೆಸಿದರು.

  ಸುಮೇಧಾ ಸಂಸ್ಥೆಯ ಕೋಶಾಧಿಕಾರಿ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್ ದನ್ಯವಾದ ಸಮರ್ಪಿಸಿದರು.

 ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ರೋ. ಸುಬ್ರಹ್ಮಣ್ಯ ಕಾರಂತ, ರೋ. ಶುಭಲಕ್ಷ್ಮಿ ಭಟ್,  ಶಾಲಾ ಮುಖ್ಯಸ್ಥೆ ಶ್ರೀಮತಿ ಸುಮನಾ ಪ್ರಭು  ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.