ಕಾಪು: ಅಂತರ್ ರಾಜ್ಯ 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಸ್ಪರ್ಧೆ
ಕಾಪು ಶ್ರೀ ಹಳೆ ಮರಿಯಮ್ಮ ಸಭಾ ಭವನದಲ್ಲಿ ನಡೆದ ಸ್ಪರ್ಧೆ
(Kaup) ಕಾಪು: ಶ್ರೀ ನಾರಾಯಣ ಗುರು ಶಾಲಾ ಆಫ್ ಚೆಸ್, ಕಾಪು ಸಂಸ್ಥೆಯು ಮಂಗಳೂರಿನ ಅಫಿಲಿಯನ್ಸ್ ಟೆಕ್ನಾಲಜೀಸ್ ಅವರ ಸಹಯೋಗದಲ್ಲಿ ಕಾಪು ಶ್ರೀ ಹಳೆ ಮರಿಯಮ್ಮ ಸಭಾ ಭವನದಲ್ಲಿ 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ಆಯೋಜಿಸಿತು.
ಟೂರ್ನಮೆಂಟ್‌ನಲ್ಲಿ ಲಕ್ಷಿತ್ ಬಿ. ಸಾಲಿಯಾನ್ ಅವರು 6 ಸುತ್ತುಗಳಲ್ಲಿ 6 ಅಂಕಗಳನ್ನು ಗಳಿಸಿ ಯಾವುದೇ ಸೋಲು ಕಾಣದೆ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
ದಕ್ಷಿಣ ಕನ್ನಡದ ವಿಹಾನ್ ಶೆಟ್ಟಿ ಅವರು ದ್ವಿತೀಯ ಸ್ಥಾನ, ಹಾಗೂ ದಕ್ಷಿಣ ಕನ್ನಡದ ಆರೂಷ್ ಭಟ್ ಅವರು ತೃತೀಯ ಸ್ಥಾನ ಪಡೆದುಕೊಂಡರು.
ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದು, ಚೆಸ್ ಕ್ರೀಡೆಯ ಮೇಲಿನ ಆಸಕ್ತಿಯನ್ನು ಪ್ರತಿಬಿಂಬಿಸುವಂತೆ ಕಾರ್ಯಕ್ರಮವು ಭರ್ಜರಿ ಯಶಸ್ಸು ಕಂಡಿತು.
ಬಹುಮಾನ ವಿತರಕರಾಗಿ ಅವಿನಾಶ್ ಶೆಟ್ಟಿ ಸ್ಥಾಪಕರು ಎಫಿಲಿಯನ್ಸ್ ಟೆಕ್ನಾಲಜಿಸ್ ಮಂಗಳೂರು, ಮುಖ್ಯ ಅತಿಥಿಗಳಾಗಿ ಸುನಿಲ್ ಪೂಜಾರಿ ಕಾರ್ಯದರ್ಶಿ ಯುವವಾಹಿನಿ ಕಾಪು, ಶ್ರೀಮತಿ ಜ್ಯೋತಿ ಇಂಗ್ಲೀಷ್ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು ಬೈಲೂರು, ಸುಧಾಕರ್ ಸಾಲ್ಯಾನ್ ಕಾಪು ಸಂಸ್ಥೆಯ ಅಧ್ಯಕ್ಷ, ಉಮಾನಾಥ ಕಾಪು, ನಾಗೇಶ್ ಕಾರಂತ್ ಪಾಂಗಾಳ ನಿರ್ದೇಶಕಿ ಸೌಂದರ್ಯ ಯು ಕೆ. ಉಪಸ್ಥಿತರಿದ್ದರು.
ಸ್ಥಾಪಕ ಸಾಕ್ಷಾತ್ ಯುಕೆ ಸ್ವಾಗತಿಸಿದರು. ಬಾಬು ಜೆ ಪೂಜಾರಿ ಉಪ್ಪುಂದ ನಿರೂಪಿಸಿದರು.

