• Home  
  • ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು
- ಅಪಘಾತ

ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು

Share:   (Pangala: Bus hits scooty, youth dies) ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು ಮೂಳೂರು ನಿವಾಸಿ ಕೃಷ್ಣರಾಜ್‌ ಆಸ್ಪತ್ರೆಯ ಹಾದಿಯಲ್ಲಿ ಸಾವು   (Pangala) ಪಾಂಗಾಳ :  ಬಸ್ಸೊಂದು ಸ್ಕೂಟಿಗೆ ಗುದ್ದಿದ ಪರಿಣಾಮ ಸ್ಕೂಟಿ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಪಾಂಗಾಳ ರಾ.ಹೆ ೬೬ರಲ್ಲಿ ಸೋಮವಾರ ಮದ್ಯಾಹ್ನ ಸಂಭವಿಸಿದೆ.   ಮೃತ ಸ್ಕೂಟಿ ಸವಾರನನ್ನು ಮೂಲತ: ಮೂಳೂರಿನ ಕೃಷ್ಣರಾಜ್‌ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಪಡುಕರೆಯಲ್ಲಿ ವಾಸಿಸುತ್ತಿದ್ದರು […]

  (Pangala) ಪಾಂಗಾಳ :  ಬಸ್ಸೊಂದು ಸ್ಕೂಟಿಗೆ ಗುದ್ದಿದ ಪರಿಣಾಮ ಸ್ಕೂಟಿ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಪಾಂಗಾಳ ರಾ.ಹೆ ೬೬ರಲ್ಲಿ ಸೋಮವಾರ ಮದ್ಯಾಹ್ನ ಸಂಭವಿಸಿದೆ.

  ಮೃತ ಸ್ಕೂಟಿ ಸವಾರನನ್ನು ಮೂಲತ: ಮೂಳೂರಿನ ಕೃಷ್ಣರಾಜ್‌ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಪಡುಕರೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

  ಪಾಂಗಾಳದ ಅಪಾಯಕಾರಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಉಡುಪಿಯಿಂದ ಕಾಪು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದೆ. ಬಸ್ಸು ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

   ಗಾಯಾಳುವನ್ನು ಮೂಳೂರಿನ ಎಸ್ಡಿಪಿಐ ಆಂಬುಲೆನ್ಸ್ ಮೂಲಕ ಸಮಾಜ ಸೇವಕ ಜಲಾಲುದ್ದೀನ್‌ ಮತ್ತು ಹಮೀದ್‌ ರವರು ಉಡುಪಿ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಮೃತ ಘೋಷಿಸಿದ್ದಾರೆ.

 ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.