• Home  
  • ಕಾಪು ತಾಲೂಕಿನಾದ್ಯಂತ “ಮುಳ್ಳಮುಟ್ಟೆ” ಸಂಭ್ರಮಾಚರಣೆ (“Mullamutte” celebrations across Kapu Taluk)
- fastival

ಕಾಪು ತಾಲೂಕಿನಾದ್ಯಂತ “ಮುಳ್ಳಮುಟ್ಟೆ” ಸಂಭ್ರಮಾಚರಣೆ (“Mullamutte” celebrations across Kapu Taluk)

Share: ಕಾಪು ತಾಲೂಕಿನಾದ್ಯಂತ ಮುಳ್ಳಮುಟ್ಟೆ ಸಂಭ್ರಮಾಚರಣೆ ಮುಳ್ಳಮುಟ್ಟೆ ಕಾರ್ಯಕ್ರಮದ ಪ್ರಯುಕ್ತ ಬಂಟ ಕೋಲವೂ ನಡೆಯುತ್ತದೆ (Kaup) ಕಾಪು: ಕಾಪು ತಾಲೂಕಿನ ವಿವಿಧೆಡೆ ನರಕಚತುರ್ದಶಿಯಂದು ಮುಂಜಾನೆ ಮುಳ್ಳಮುಟ್ಟೆ ಸಂಭ್ರಮಾಚರಣೆ ನಡೆಯುತ್ತದೆ.     ವಿಶೇಷವಾಗಿ ಕೊಪ್ಪಲಂಗಡಿ, ಮಲ್ಲಾರು, ಮಜೂರು, ಇನ್ನಂಜೆ, ಕಲ್ಯಾಲು, ಪಾಂಗಾಳ, ಕಟಪಾಡಿ, ಮಣಿಪುರ, ಪಡುಬೆಳ್ಳೆ, ಬೆಳಪು ಪರಿಸರದಲ್ಲಿ ವಿಶೇಷವಾಗಿ ಈ ಮುಳ್ಳಮುಟ್ಟೆ ಆಚರಣೆ ನಡೆಯುತ್ತದೆ.    ಅದರಲ್ಲೂ ವಿಶೇಷವೆಂಬಂತೆ ಕೊಪ್ಪಲಂಗಡಿ, ಇನ್ನಂಜೆಯಲ್ಲಿ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದ ಪ್ರಯುಕ್ತ ಬಂಟ ಕೋಲ ನಡೆಯುತ್ತದೆ.    ಕೊಪ್ಪಲಂಗಡಿ, ಇನ್ನಂಜೆ ಪರಿಸರದಲ್ಲಿ […]

(Kaup) ಕಾಪು: ಕಾಪು ತಾಲೂಕಿನ ವಿವಿಧೆಡೆ ನರಕಚತುರ್ದಶಿಯಂದು ಮುಂಜಾನೆ ಮುಳ್ಳಮುಟ್ಟೆ ಸಂಭ್ರಮಾಚರಣೆ ನಡೆಯುತ್ತದೆ.

    ವಿಶೇಷವಾಗಿ ಕೊಪ್ಪಲಂಗಡಿ, ಮಲ್ಲಾರು, ಮಜೂರು, ಇನ್ನಂಜೆ, ಕಲ್ಯಾಲು, ಪಾಂಗಾಳ, ಕಟಪಾಡಿ, ಮಣಿಪುರ, ಪಡುಬೆಳ್ಳೆ, ಬೆಳಪು ಪರಿಸರದಲ್ಲಿ ವಿಶೇಷವಾಗಿ ಈ ಮುಳ್ಳಮುಟ್ಟೆ ಆಚರಣೆ ನಡೆಯುತ್ತದೆ.

   ಅದರಲ್ಲೂ ವಿಶೇಷವೆಂಬಂತೆ ಕೊಪ್ಪಲಂಗಡಿ, ಇನ್ನಂಜೆಯಲ್ಲಿ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದ ಪ್ರಯುಕ್ತ ಬಂಟ ಕೋಲ ನಡೆಯುತ್ತದೆ.

   ಕೊಪ್ಪಲಂಗಡಿ, ಇನ್ನಂಜೆ ಪರಿಸರದಲ್ಲಿ ಮುಳ್ಳಮುಟ್ಟೆಗೆ ಪೂರ್ವಭಾವಿಯಾಗಿ ಬಂಟ ಕೋಲ ನಡೆಯುವ ಸಂಪ್ರದಾಯವಿದೆ. ಬಂಟ ಕೋಲದ ವೇಷಧಾರಿಗಳು ಊರಿನ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ತೆರಳಿ, ಕಾಣಿಕೆ ಸಮರ್ಪಿಸಿ ಊರಿನ ಮಾರಿ ಓಡಿಸಲು ಶಕ್ತಿ ನೀಡಿ ಎಂದು ದೇವರಲ್ಲಿ ಪ್ರಾರ್ಥಿಸುವ ಸಂಪ್ರಧಾಯವಿದೆ.

     ಬಂಟ ಕೋಲದ ಜೊತೆಗೆ ಯುವಕರು ಕೂಡಾ ವಾದ್ಯ, ತಾಸೆ, ಡೋಲಿನ ವಾದನಕ್ಕೆ ತೂಟೆಯನ್ನು ಹಿಡಿದುಕೊಂಡು ನೃತ್ಯ ಮಾಡುವ ಸಂಪ್ರದಾಯವೂ ಇಲ್ಲಿದೆ.

    ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಕೃಷಿಗೆ ಪೂರಕವಾಗಿ ನಡೆಸುತ್ತಿದ್ದ ಮುಳ್ಳಮುಟ್ಟೆ ಕಾರ್ಯಕ್ರಮಕ್ಕೆ ಇಂದು ಧಾರ್ಮಿಕ ಸ್ಪರ್ಷವೂ ಇದೆ. ಇದು ನರಕಾಸುರ ವಧೆಯನ್ನು ನೆನಪಿಸುವಂತೆ ಮಾಡುತ್ತದೆ. ನರಕಾಸುರ ವಧೆಯ ಕಲ್ಪನೆಯೊಂದಿಗೆ ಊರಿಗೆ ಬಂದಿರುವ ದುಷ್ಟಾರಿಷ್ಟಗಳು ದೂರವಾಗಲಿ ಎಂಬ ಉದ್ದೇಶದಿಂದ ಮುಳ್ಳು ಮುಟ್ಟೆ ದಹಿಸಲಾಗುತ್ತದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.