• Home  
  • ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್  ಉಡುಪಿ ಪದಗ್ರಹಣ ಸಮಾರಂಭ (Coastal Christian Chamber of Commerce Udupi Inauguration Ceremony)
- ಸಂಘ, ಸಂಸ್ಥೆಗಳು

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್  ಉಡುಪಿ ಪದಗ್ರಹಣ ಸಮಾರಂಭ (Coastal Christian Chamber of Commerce Udupi Inauguration Ceremony)

Share: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್  ಉಡುಪಿ ಪದಗ್ರಹಣ ಸಮಾರಂಭ ಅಧ್ಯಕ್ಷರಾಗಿ ಅಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿಯಾಗಿ ವಿಲ್ಸನ್ ಡಿಸೋಜ ಶಿರ್ವ ಆಯ್ಕೆ (Udupi) ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಆಯೋಜನೆಯಲ್ಲಿ ಪ್ರೇರಣಾ ಪ್ರಶಸ್ತಿ ಹಾಗೂ ಮಹಾಸಭೆ ನಡೆದಿದ್ದ ಸಭೆಯಲ್ಲಿ 18 ಮಂದಿ ಸಮಿತಿ ಸದಸ್ಯರು ಆಯ್ಕೆಯಾಗಿದ್ದರು. ಮಣಿಪಾಲದ ವ್ಯಾಲಿ ವ್ಯೂವ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-2027 ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.    ಗೌರವಾಧ್ಯಕ್ಷರಾಗಿ ಜೆರಿ ವಿನ್ಸೆಂಟ್ […]

(Udupi) ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಆಯೋಜನೆಯಲ್ಲಿ ಪ್ರೇರಣಾ ಪ್ರಶಸ್ತಿ ಹಾಗೂ ಮಹಾಸಭೆ ನಡೆದಿದ್ದ ಸಭೆಯಲ್ಲಿ 18 ಮಂದಿ ಸಮಿತಿ ಸದಸ್ಯರು ಆಯ್ಕೆಯಾಗಿದ್ದರು. ಮಣಿಪಾಲದ ವ್ಯಾಲಿ ವ್ಯೂವ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-2027 ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.

   ಗೌರವಾಧ್ಯಕ್ಷರಾಗಿ ಜೆರಿ ವಿನ್ಸೆಂಟ್ ಡಾಯಸ್, ಅಧ್ಯಕ್ಷರಾಗಿ ಅಲ್ವಿನ್ ಕ್ವಾಡ್ರಸ್- ಕೋಟ, ಉಪಾಧ್ಯಕ್ಷರಾಗಿ  ಜಿತೇಂದ್ರ ಫುರ್ಟಾಡೊ – ಫಲಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ವಿಲ್ಸನ್ ಡಿಸೋಜ ಶಿರ್ವ, ಜೊತೆ ಕಾರ್ಯದರ್ಶಿಯಾಗಿ ಜೀವನ್ ಸಾಲಿನ್ಸ್- ಕುಂದಾಪುರ, ಕೋಶಾಧಿಕಾರಿಯಾಗಿ ಮೆಕ್ಸಿಮ್ ಸ್ಟೀಫನ್ ಸಲ್ಧಾನ ಉಡುಪಿ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿ ಸಂತೋಷ್ ಡಿಸಿಲ್ವ- ಕಾರ್ಕಳ ಚುನಾಯಿತರಾದರು.

    ನಿರ್ದೇಶಕ ಮಂಡಳಿ ಲುವಿಸ್ ಲೋಬೊ – ಕಲ್ಮಾಡಿ,  ಗ್ರೆಗೊರಿ ಮಿನೇಜಸ್ – ಬೆಳ್ಮಣ್, ವಾಲ್ಟರ್ ಸಲ್ಧಾನ- ಉಡುಪಿ, ಡೆರಿಕ್ ಡಿಸೋಜ -ಸಾಸ್ತಾನ, ಡಾಲ್ಫಿ ಮಸ್ಕರೇನ್ಹಸ್ – ಉಡುಪಿ, ಜೆರಾಲ್ಡ್ ಫೆರ್ನಾಂಡಿಸ್- ಮೂಡುಬೆಳ್ಳೆ, ಜೋನ್ಸನ್ ಅಲ್ಮೇಡ- ಕುಂದಾಪುರ,  ಪ್ರಕಾಶ್ ಪಿಂಟೊ- ಕಾರ್ಕಳ, ಪ್ರಶಾಂತ್ ಜತ್ತನ್ನ ಕಟಪಾಡಿ,  ಫ್ರಾನ್ಸಿಸ್ ಡಿಸೋಜ ಪಲಿಮಾರ್, ಟೆರೆನ್ಸ್ ಸುವಾರಿಸ್ ಉಡುಪಿ, ಆಲಾನ್ ವಾಸ್ –ಬ್ರಹ್ಮಾವರ ಆಯ್ಕೆ ಆಗಿದ್ದಾರೆ.

ಸಮಾರಂಭವು ಕುಟುಂಬ ಸಮ್ಮಿಲನದೊಂದಿಗೆ ಸಮಾಪ್ತಿ ಗೊಂಡಿದೆ.

ಸಂಸ್ಥೆಯ ಬಗ್ಗೆ

  ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯು ಪ್ರಾರಂಭಗೊಂಡು 12 ವರ್ಷಗಳು ಕಳೆದಿದೆ. ಈ ಸಂಸ್ಥೆಯು ಕರಾವಳಿ ಭಾಗದ ಜಿಲ್ಲೆಯಾದ ಉಡುಪಿಯಲ್ಲಿ ಕಾರ್ಯವ್ಯಾಪ್ತಿಯನ್ನು ನಡೆಸುತ್ತಿದೆ. ಕ್ರೈಸ್ತ ಸಮುದಾಯದ ಎಲ್ಲಾ ವರ್ಗಗಳನ್ನು (ರೋಮನ್ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್, ಆರ್ಥೋಡಾಕ್ಸ್ ಇನ್ನಿತರ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ತರು, ವೃತ್ತಿಪರರು ಹಾಗೂ ಕೃಷಿಕರು ಸದಸ್ಯರಾಗಿರುತ್ತಾರೆ. ಕೇವಲ 30 ಜನ ಅಜೀವ ಸದಸ್ಯರಿಂದ ಪ್ರಾರಂಭಗೊಂಡು ಸಂಸ್ಥೆಯು ಇಂದು 181 ಸದಸ್ಯರನ್ನು ಹೊಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.