• Home  
  • ಪರ್ಕಳ ಮಹಾಲಿಂಗೇಶ್ವರ ದೇಗುಲದ ಮುಂಭಾಗ ಬೃಹತ್ ಗಾತ್ರದ ಗೂಡುದೀಪ ಪ್ರದರ್ಶನ (A huge Guddeepa display in front of Parkala Mahalingeshwara temple)
- fastival

ಪರ್ಕಳ ಮಹಾಲಿಂಗೇಶ್ವರ ದೇಗುಲದ ಮುಂಭಾಗ ಬೃಹತ್ ಗಾತ್ರದ ಗೂಡುದೀಪ ಪ್ರದರ್ಶನ (A huge Guddeepa display in front of Parkala Mahalingeshwara temple)

Share:   ಪರ್ಕಳ ಮಹಾಲಿಂಗೇಶ್ವರ ದೇಗುಲದ ಮುಂಭಾಗ ಬೃಹತ್ ಗಾತ್ರದ ಗೂಡುದೀಪ ಪ್ರದರ್ಶನ  ಪರ್ಕಳ ವಾಲಿಬಾಲ್ ಫ್ರೆಂಡ್ಸ್ ತಂಡದ ಕಾರ್ಯಕ್ಕೆ ಭಾರೀ ಮೆಚ್ಚುಗೆ (Udupi) ಉಡುಪಿ: ದೇಶದ ಗಡಿ ಕಾಯುವ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ವಾಲಿಬಾಲ್ ಫ್ರೆಂಡ್ಸ್ ಪರ್ಕಳ ಇದರ ವತಿಯಿಂದ ಸಹಕಾರ ಭಾರತಿಯ ಸಹಯೋಗದೊಂದಿಗೆ ಬೃಹತ್ ಗಾತ್ರದ ಗೂಡುದೀಪವನ್ನು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ದೇವಸ್ಥಾನದ ಮುಂಭಾಗದಲ್ಲಿ ಪ್ರದರ್ಶಿಸಲಾಯಿತು.    ವಾಲಿಬಾಲ್ ಫ್ರೆಂಡ್ಸ್ ಪರ್ಕಳ ತಂಡವು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ […]

(Udupi) ಉಡುಪಿ: ದೇಶದ ಗಡಿ ಕಾಯುವ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ವಾಲಿಬಾಲ್ ಫ್ರೆಂಡ್ಸ್ ಪರ್ಕಳ ಇದರ ವತಿಯಿಂದ ಸಹಕಾರ ಭಾರತಿಯ ಸಹಯೋಗದೊಂದಿಗೆ ಬೃಹತ್ ಗಾತ್ರದ ಗೂಡುದೀಪವನ್ನು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ದೇವಸ್ಥಾನದ ಮುಂಭಾಗದಲ್ಲಿ ಪ್ರದರ್ಶಿಸಲಾಯಿತು.

   ವಾಲಿಬಾಲ್ ಫ್ರೆಂಡ್ಸ್ ಪರ್ಕಳ ತಂಡವು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಬೃಹತ್ ಗಾತ್ರದ ಗೂಡುದೀಪವನ್ನು ನಿರ್ಮಿಸಲಾಗಿದೆ.

    ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿರುವ ಗೂಡುದೀಪವು ಆಕರ್ಷಕವಾಗಿ ಕಂಗೊಳಿಸುತ್ತಿದೆ. ವಾಲಿಬಾಲ್ ಫ್ರೆಂಡ್ಸ್ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.