• Home  
  • ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ (Amicable Eid Milad celebration across Kapu Taluk)
- ಧಾರ್ಮಿಕ

ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ (Amicable Eid Milad celebration across Kapu Taluk)

Share: ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ ಮಕ್ಕಳ ದಫ್ ಪ್ರದರ್ಶನ, ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ ಹಾಡು, ವಾಹನ ಜಾಥಾದ ಮೆರಗು (kaup) ಕಾಪು: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಕಾಪು ತಾಲೂಕಿನಾದ್ಯಂತ ಧಾರ್ಮಿಕ ಶ್ರದ್ಧಾಭಕ್ತಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಚರಿಸಲಾಯಿತು.   ಈ ಪ್ರಯುಕ್ತ ಕಂಚಿನಡ್ಕ ಜುಮಾ ಮಸೀದಿಯಿಂದ ಮೆರವಣಿಗೆ ಆರಂಭಗೊಂಡಿತು. ಮಕ್ಕಳ ದಫ್ ಪ್ರದರ್ಶನ ಹಾಗೂ ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ […]

ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ

(kaup) ಕಾಪು: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಕಾಪು ತಾಲೂಕಿನಾದ್ಯಂತ ಧಾರ್ಮಿಕ ಶ್ರದ್ಧಾಭಕ್ತಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಚರಿಸಲಾಯಿತು.

  ಈ ಪ್ರಯುಕ್ತ ಕಂಚಿನಡ್ಕ ಜುಮಾ ಮಸೀದಿಯಿಂದ ಮೆರವಣಿಗೆ ಆರಂಭಗೊಂಡಿತು. ಮಕ್ಕಳ ದಫ್ ಪ್ರದರ್ಶನ ಹಾಗೂ ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ ಹಾಡುಗಳೊಂದಿಗೆ ಮೆರವಣಿಗೆ ಸಾಗಿತು. ಸ್ಕೌಟ್ಸ್ ತಂಡದ ಪಥಸಂಚಲನ ಹಾಗೂ ವಾಹನ ಜಾಥಾ ಕೂಡ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.

  ಕಂಚಿನಡ್ಕ ಜುಮಾ ಮಸೀದಿಯಿಂದ ಹೊರಟ ಮೆರವಣಿಗೆ ಪಡುಬಿದ್ರಿ ಜುಮಾ ಮಸೀದಿವರೆಗೆ ಸಾಗಿತು. ವಿವಿಧ ಸಮುದಾಯಗಳ ನಡುವೆ ಪ್ರೀತಿ, ಸಹಬಾಳ್ವೆ, ಸ್ನೇಹ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಈ ಆಚರಣೆ ಗಮನ ಸೆಳೆಯಿತು.

  ಈ ಸಂದರ್ಭದಲ್ಲಿ ಮಾತನಾಡಿದ ಪಡುಬಿದ್ರಿ ಜುಮಾ ಮಸೀದಿಯ ಖತೀಬರಾದ ಝೈನುದ್ದೀನ್ ಸಖಾಫಿ ಸುರೈಜಿ, “ಪ್ರವಾದಿ ಮೊಹಮ್ಮದ್ ಅವರ ಸಂದೇಶದಂತೆ ಸರ್ವ ಜನಾಂಗದವರೂ ಪ್ರೀತಿ, ವಿಶ್ವಾಸ, ಸ್ನೇಹ ಹಾಗೂ ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸಬೇಕು ಎಂಬ ಆಶಯದೊಂದಿಗೆ ಈದ್ ಮಿಲಾದ್ ಆಚರಿಸುತ್ತಿದ್ದೇವೆ” ಎಂದರು.

  ಭಾರತವು ಸರ್ವ ಧರ್ಮೀಯರು ತಮ್ಮ ಧಾರ್ಮಿಕ ಆಚರಣೆಗಳನ್ನು ಸ್ವಾತಂತ್ರ್ಯದಿಂದ ನಡೆಸಿಕೊಂಡು ಸುಂದರ ಜೀವನ ನಡೆಸಲು ಅವಕಾಶ ಕಲ್ಪಿಸಿರುವ ಪವಿತ್ರ ಭೂಮಿಯಾಗಿದೆ. ದೇಶದ ಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆ ಮತ್ತಷ್ಟು ಬಲಗೊಳ್ಳಬೇಕು ಎಂದು ಅವರು ಆಶಿಸಿದರು.

   ಈ ಸಂದರ್ಭದಲ್ಲಿ ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷ ಮೊಹಿದ್ದೀನ್ ಲಚ್ಚಿಲ್, ಕಂಚಿನಡ್ಕ ಮಸೀದಿ ಖತೀಬ್ ಅಬ್ದುಲ್ ಲತೀಫ್ ಮದನಿ, ನೂರಾನಿ ಮಸೀದಿ ಖತೀಬ್ ಮೌಲಾನ ಖುದ್ದುಸ್, ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಶಾಫಿ, ಮೊಹಮ್ಮದ್ ನಿಯಾಝ್, ರಮೀಜ್ ಹುಸೇನ್, ಹಸನ್ ಭಾವ ಕಂಚಿನಡ್ಕ, ಅಬ್ದುಲ್ ಅಸಿಸ್, ಫಿರೋಜ್ ಹಾಗೂ ಎ.ಕೆ. ಸೈಯದ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.