ಮಲ್ಲಾರು ಶಫಿ ಅಹಮದ್ ಉಸ್ತಾದ್ ನಿಧನ
ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆಯ ಮಾಜಿ ಅಧ್ಯಕ್ಷರಾಗಿದ್ದ ಶಫಿ ಅಹಮದ್
(Kaup) ಕಾಪು : ಮಲ್ಲಾರು ನಿವಾಸಿ ಉಸ್ತಾದ್ ಎಂದೇ ಕರೆಯಲ್ಪಡುತಿದ್ದ ಶಫಿ ಅಹಮದ್ (75) ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಇವರು ಜಮಾ ಆತೆ ಇಸ್ಲಾಮಿ ಹಿಂದ್ ನ ಸದಸ್ಯರು ಆಗಿದ್ದು ಕಾಪು ಶಾಖೆಯ ಅಧ್ಯಕ್ಷರು ಆಗಿ ಕಾರ್ಯ ನಿರ್ವಹಿಸಿದ್ದರು.
ಸರಕಾರಿ ಮಲ್ಲಾರು ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ, ಮಲ್ಲಾರು ಜನರಲ್ ಶಾಲೆಯಲ್ಲಿ, ಕೈಪುಂಜಾಲ್ ಹಾಗೂ ತೊಟ್ಟಮ್ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾಗಿ, ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ನಲ್ಲಿ ಜೊತೆ ಕಾರ್ಯದರ್ಶಿಯಾಗಿ ಸ್ಥಳೀಯ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಸೇವೆಯನ್ನು ನೀಡಿದ್ದು, ಇವರ ಸುಂದರ ಕೈ ಬರಹವು ಜನಪ್ರಿಯ ಆಗಿರುತ್ತದೆ.
ಇವರು ಪತ್ನಿ, ಎರಡು ಗಂಡು, ಒಂದು ಹೆಣ್ಣು ಮಗಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

