• Home  
  • ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ (Valedictory Ceremony of the 8th Kapu Taluk Kannada Literary Conference)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸಹಾಯ ಹಸ್ತ - ಸೌಹಾರ್ಧ

ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ (Valedictory Ceremony of the 8th Kapu Taluk Kannada Literary Conference)

Share: ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ  ಜಾನಪದ ಕಾಪು ವೈಭವ, ಸಾಧಕರಿಗೆ ಸನ್ಮಾನ (Kaup) ಕಾಪು : ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ  ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾಪು ಪ್ರಥಮ ದರ್ಜೆ ಕಾಲೇಜಿನ ಡಾ.ವಿ. ಎಸ್.ಆಚಾರ್ಯ ಸಭಾಂಗಣದಲ್ಲಿ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಇವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು.    ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕನ್ನಡದ ಬೆಳವಣಿಗೆಗೆ ಪೂರಕವಾದ […]

(Kaup) ಕಾಪು : ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ  ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾಪು ಪ್ರಥಮ ದರ್ಜೆ ಕಾಲೇಜಿನ ಡಾ.ವಿ. ಎಸ್.ಆಚಾರ್ಯ ಸಭಾಂಗಣದಲ್ಲಿ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಇವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು.

   ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕನ್ನಡದ ಬೆಳವಣಿಗೆಗೆ ಪೂರಕವಾದ ವಿಚಾರಗಳು, ಯುವಜನರಲ್ಲಿ  ಕನ್ನಡಾಭಿಮಾನ  ಬೆಳೆಸುವ ಚರ್ಚೆಗಳು ಹಾಗೂ ನಾಡಿನ ಸಮಸ್ಯೆಗಳ ಕುರಿತು ವಿಚಾರ ವಿನಿಮಯಕ್ಕೆ ಸಮ್ಮೇಳನ ವೇದಿಕೆಯಾಗಬೇಕು. ಕಾಪು ತಾಲೂಕು ಸಮ್ಮೇಳನ ಈ ನಿಟ್ಟಿನಲ್ಲಿ ಉತ್ತಮ ಸ್ಪಂದನ ನೀಡಿದೆ ಎಂದರು.

   ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮಾತನಾಡಿ, ಸಾಹಿತ್ಯ ಹಾಗೂ ಲೇಖನಗಳ ಮೂಲಕ ಗಾಂಧೀಜಿಯವರ ಆದರ್ಶ ಮತ್ತು ಚಿಂತನೆಗಳನ್ನು ಜನರಲ್ಲಿ ಹರಡಿಸಲು ಸಾಧ್ಯ. ಹೊಸ ತಾಲೂಕಾಗಿ ರಚನೆಗೊಂಡ ಕಾಪುವಿನಲ್ಲಿ ಎಂಟು ವರ್ಷಗಳ ಅವಧಿಯಲ್ಲಿ ಪುಂಡಲೀಕ ಮರಾಠೆಯವರ ನೇತೃತ್ವದಲ್ಲಿ ಎಲ್ಲಾ ಸಮುದಾಯದವರನ್ನೂ ಸೇರಿಸಿ  ನಿರಂತರ ಎಂಟು ಸಮ್ಮೇಳನಗಳನ್ನು ನಡೆಸುವ ಮೂಲಕ ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.

  ಅದಾನಿ ಯುಪಿಸಿಎಲ್ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ ಸಾಧಕರನ್ನು ಸನ್ಮಾನಿಸಿ, ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಕರಾವಳಿಯ  ಸಾಧನೆ ಶ್ಲಾಘನೀಯವಾಗಿದೆ. ಕಾಪು ತಾಲೂಕಿನಲ್ಲಿ ಕನ್ನಡ ಭಾಷೆ, ನಡೆನುಡಿ,ನೆಲ-ಜಲದ ರಕ್ಷಣೆಯ ಉದ್ದೇಶಕ್ಕಾಗಿ ನಡೆಯುತ್ತಿರುವ  ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳಿಗೆ  ಪೂರ್ಣ ಸಹಕಾರ ನೀಡುತ್ತಿದ್ದು, ಮುಂದೆಯೂ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

 ಕಸಾಪ  ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಉಡುಪಿ ಜಿಲ್ಲೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಬೆಳೆಯುತ್ತಿದೆ. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು, ಕಾರ್ಯನಿರ್ವಹಿಸುತ್ತಿದೆ. ಎಂಟು ಸಮ್ಮೇಳನಗಳಲ್ಲಿ  ವಿವಿಧ ಸಮುದಾಯಗಳ ಸಾಧಕ ಸಾಹಿತಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸರಕಾರ ಪ್ರಾಥಮಿಕ ಶಾಲೆಗಳಲ್ಲಿ ನಲಿಕಲಿ ವ್ಯವಸ್ಥೆ ಉಳಿಸಿದಾಗ ಮಾತ್ರ ಕನ್ನಡ ಬೆಳೆಯಲು ಸಾಧ್ಯ ಎಂದರು.

   ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಡಾ. ವೈ. ಎನ್.ಶೆಟ್ಟಿಯವರು ಪ್ರತಿಸ್ಪಂದನೆಯ ನುಡಿಗಳನ್ನಾಡಿ ಸಮ್ಮೇಳನವನ್ನು ವಿದ್ವತ್ಪೂರ್ಣವಾಗಿ ಸಂಘಟಿಸಿದ ಕಸಾಪ ತಾಲೂಕು ಸಮಿತಿಯನ್ನು ಅಭಿನಂದಿಸಿ, ಸರ್ವಾಧ್ಯಕ್ಷತೆ ನೀಡಿ ಗೌರವಿಸಿದ್ದಾಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

  ನಿವೃತ್ತ ಪ್ರಾಚಾರ್ಯ ಡಾ. ಎಲ್ಲೂರು ರವೀಂದ್ರನಾಥ್ ರಾವ್  ಸಮಾರೋಪ ಭಾಷಣ ಮಾಡಿದರು.

  ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರಿ, ಸಮ್ಮೇಳನದ ಕಾರ್ಯಾಧ್ಯಕ್ಷ  ಡಾ. ಗೋಪಾಲಕೃಷ್ಣ ಗಾಂವ್ಕರ್, ಜಿಲ್ಲಾ ಸಮಿತಿಯ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಗೌ. ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಬೀರ, ಕೆ.ಆರ್.ಪಾಟ್ಕರ್ ವೇದಿಕೆಯಲ್ಲಿದ್ದರು.

  ಕಸಾಪ ಸಹ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಸ್ವಾಗತಿಸಿದರು. ದೇವದಾಸ ಪಾಟ್ಕರ್ ನಿರೂಪಿಸಿದರು. ಗೌ. ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.

  ಸಾಧಕರಿಗೆ ಸನ್ಮಾನ : ಆಪದ್ಭಾಂಧವ  ಸೇವೆಗಾಗಿ – ಸೂರಿ ಶೆಟ್ಟಿ ಕಾಪು,  ಸಮಾಜಸೇವೆ ಮತ್ತು ಸಂಘಟನೆ -ಮಾಧವ ಕಾಮತ್ ಬಂಟಕಲ್ಲು, ಸಾಂಪ್ರದಾಯಿಕ ಪ್ರಗತಿಪರ ಕೃಷಿ- ಪಾಲಮೆ ಗೋಪಾಲ ರಾವ್,  ನಾಟಿವೈದ್ಯ ಪದ್ದತಿಗಾಗಿ – ಸುಧಾಕರ ಸಾಲಿಯಾನ್, ಹಿರಿಯ ಮೀನು ಮಾರಾಟಗಾರರಾಗಿರುವ ಜಯಂತಿ ಮೆಂಡನ್ ಕಾಪು,  ಸಾಹಿತ್ಯ ಕ್ಷೇತ್ರದಲ್ಲಿ ಮೋಹನದಾಸ್ ಜಿ. ಕಿಣಿ ಕಾಪು,  ಪಾಕತಜ್ಞ ಮಟ್ಟುವಿನ ದೇವಗಳ ವಿಷ್ಣುಮೂರ್ತಿ, ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಶಶಿಧರ ವಾಗ್ಲೆ ಸಡಂಬೈಲು (ಬೆಳ್ಳೆ), ಮಾಧ್ಯಮ ಕ್ಷೇತ್ರದಲ್ಲಿ ರಾಕೇಶ್ ಕುಂಜೂರು, ಪ್ರಗತಿಪರ ಕೂಲಿ ಕಾರ್ಮಿಕ ಹನುಮಂತ ಎರ್ಮಾಳ್, ಹಿರಿಯ ಕಾಷ್ಠ ಶಿಲ್ಪಿ ವಿಠಲ ಆಚಾರ್ಯ ಶಿರ್ವ ಪದವು,  ಸಾಂಪ್ರದಾಯಿಕ ವಾದ್ಯ ಕಲೆ- ಕಾಪು ಅಕ್ಬರ್ ಸಾಹೇಬ್, ಹಿರಿಯ ಡೋಲುವಾದಕ -ಗುರುವ ಕಾಪುರವರನ್ನು ಸನ್ಮಾನಿಸಲಾಯಿತು.

 ಇದೇ ಸಂದರ್ಭದಲ್ಲಿ ಎಂಟು ಸಾಹಿತ್ಯ ಸಮ್ಮೇಳನಗಳ ಕಾರ್ಯಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.