ಕಾಪು ಮಾರಿಗುಡಿ ಬಳಿ ಸ್ಕೂಟರ್ ಇಟ್ಟು ತೆರಳಿದ ಮಹಿಳೆ ನಾಪತ್ತೆ
(Padubidri) ಪಡುಬಿದ್ರಿ: ಕಾಪು ಮಾರಿಗುಡಿ ಬಳಿ ಬೆಳಿಗ್ಗೆ ಸ್ಕೂಟರ್ ಇಟ್ಟು ಹೋಗಿರುವ ಎರ್ಮಾಳು ಗ್ರಾಮದ ನಿವಾಸಿ ವರ್ಷಾ(27) ಎಂಬ ಮಹಿಳೆ ಮನೆಗೆ ಬಂದಿಲ್ಲ. ಆಕೆಯ ಅಣ್ಣಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತಾದ ದೂರು ದಾಖಲಿಸಿದ್ದಾರೆ.
ವರ್ಷಾಳ ಗಂಡ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು ಕೆಲಸಕ್ಕೆ ತೆರಳಿದ್ದರು. ಆಕೆ ಮನೆಬಿಟ್ಟು ತೆರಳುವ ವೇಳೆ ಅತ್ತೆ, ಮಾವ ಕೂಡಾ ಮನೆಯಲ್ಲಿ ಇರಲಿಲ್ಲ. ವರ್ಷಾ ಅವರು ೫.೨ಅಡಿ ಎತ್ತರ, ಗೋದಿ ಮೈಬಣ್ಣ, ದಪ್ಪ ಶರೀರ ಹೊಂದಿರುವ ಈಕೆ, ಕರಿಮಣಿ ಸರ ಧರಿಸಿದ್ದಾರೆ. ತುಳು, ಕನ್ನಡ ಭಾಷೆಗಳನ್ನು ಮಾತಾಡಬಲ್ಲವರಾಗಿದ್ದಾರೆ.
ಈಕೆಯ ಕುರಿತಾಗಿ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ(08202555452)ಯನ್ನು ಸಂಪರ್ಕಿಸಬಹುದಾಗಿದೆ.

