• Home  
  • ಕಾಪು ಮಾರಿಯಮ್ಮನ ದರ್ಶನ ಪಡೆದ ಕನ್ನಡ   ಚಲನಚಿತ್ರ ನಟ ದ್ರುವ ಸರ್ಜಾ (Kannada film actor Dhruva Sarja had a darshan of Kaup Mariamma)
- ಧಾರ್ಮಿಕ

ಕಾಪು ಮಾರಿಯಮ್ಮನ ದರ್ಶನ ಪಡೆದ ಕನ್ನಡ   ಚಲನಚಿತ್ರ ನಟ ದ್ರುವ ಸರ್ಜಾ (Kannada film actor Dhruva Sarja had a darshan of Kaup Mariamma)

Share: ಕಾಪು ಮಾರಿಯಮ್ಮನ ದರ್ಶನ ಪಡೆದ ಕನ್ನಡ   ಚಲನಚಿತ್ರ ನಟ ದ್ರುವ ಸರ್ಜಾ  ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿಯಿಂದ ಗೌರವಾರ್ಪಣೆ  (Kaup) ಕಾಪು : ಕಾಪು ಶ್ರೀ ಹೊಸ ಮಾರಿಗುಡಿಗೆ ಖ್ಯಾತ ಚಲನಚಿತ್ರ ನಟ ದ್ರುವ ಸರ್ಜಾ, ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ಸಮೃದ್ಧಿ ವಿ ಮಂಜುನಾಥ್,  ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀನಿವಾಸ್ ರಾಜು, ನಟಿ ದೇವಿಕಾ ರಾಣಿ, ಡೆಕ್ಕನ್ ಸಮೂಹ ಸಂಸ್ಥೆ ಮಾಲಕ ಶಶಿಕಾಂತ್, ಟ್ರಾವೆಲ್ ಮಾರ್ಟ್ ಸಂಸ್ಥೆ ಮಾಲಕ ಮೋಹನ್ ಸುಂದರ್ ಭಾನುವಾರ ಸಂಜೆ […]

 (Kaup) ಕಾಪು : ಕಾಪು ಶ್ರೀ ಹೊಸ ಮಾರಿಗುಡಿಗೆ ಖ್ಯಾತ ಚಲನಚಿತ್ರ ನಟ ದ್ರುವ ಸರ್ಜಾ, ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ಸಮೃದ್ಧಿ ವಿ ಮಂಜುನಾಥ್,  ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀನಿವಾಸ್ ರಾಜು, ನಟಿ ದೇವಿಕಾ ರಾಣಿ, ಡೆಕ್ಕನ್ ಸಮೂಹ ಸಂಸ್ಥೆ ಮಾಲಕ ಶಶಿಕಾಂತ್, ಟ್ರಾವೆಲ್ ಮಾರ್ಟ್ ಸಂಸ್ಥೆ ಮಾಲಕ ಮೋಹನ್ ಸುಂದರ್ ಭಾನುವಾರ ಸಂಜೆ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರ್ಶನ ಪಡೆದರು.

   ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯರವರು ಪೂಜೆ ಸಲ್ಲಿಸಿ, ಮಾರಿಯಮ್ಮನ   ಅನುಗ್ರಹ ಪ್ರಸಾದ ನೀಡಿದರು.

 ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮಕ್ಷಮದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

   ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ರವೀಂದ್ರ ಮಲ್ಲಾರು, ಜಯಲಕ್ಷ್ಮಿ ಎಸ್. ಶೆಟ್ಟಿ, ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಸುನಿಲ್ ಎಸ್. ಪೂಜಾರಿ, ಸಾವಿತ್ರಿ ಗಣೇಶ್, ಜಯರಾಮ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.