• Home  
  • ನೆಹರೂ, ಇಂದಿರಾ ಗಾಂಧಿಗೇ ಹೆದರಿಲ್ಲ, ಇನ್ನು  ಖರ್ಗೆಗೆ ಹೆದರುತ್ತೇವೆಯೇ? ಸುನಿಲ್ ಪ್ರಶ್ನೆ(We were not afraid of Nehru and Indira Gandhi, are we now afraid of Kharge? Sunil questions)
- ರಾಜಕೀಯ

ನೆಹರೂ, ಇಂದಿರಾ ಗಾಂಧಿಗೇ ಹೆದರಿಲ್ಲ, ಇನ್ನು  ಖರ್ಗೆಗೆ ಹೆದರುತ್ತೇವೆಯೇ? ಸುನಿಲ್ ಪ್ರಶ್ನೆ(We were not afraid of Nehru and Indira Gandhi, are we now afraid of Kharge? Sunil questions)

Share: ನೆಹರೂ, ಇಂದಿರಾ ಗಾಂಧಿಗೇ ಹೆದರಿಲ್ಲ, ಇನ್ನು  ಖರ್ಗೆಗೆ ಹೆದರುತ್ತೇವೆಯೇ?  ಸುನಿಲ್ ಪ್ರಶ್ನೆ ಉಡುಪಿಯಲ್ಲಿ ಶಾಸಕ ಸುನೀಲ್‌ ಕುಮಾರ್‌ ಪ್ರತಿಕ್ರಿಯೆ (Udupi) ಉಡುಪಿ: ಆರೆಸ್ಸೆಸ್ ವಿರುದ್ಧ ಇದ್ದ ಇಂದಿರಾ ಗಾಂಧಿ ಮತ್ತು ನೆಹರೂ ಅವರಿಗೇ ಹೆದರಿರಲಿಲ್ಲ,  ಮಂಡಿಯೂರಲಿಲ್ಲ, ಇನ್ನು ಪ್ರಿಯಾಂಕ ಖರ್ಗೆಗೆ ಹೆದರುತ್ತೇವೆಯೇ? ಎಂದು  ಕಾರ್ಕಳ ಶಾಸಕ ಸುನಿಲ್ ಪ್ರಶ್ನೆ ಮಾಡಿದ್ದಾರೆ.     ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸುನಿಲ್ ಕುಮಾರ್, ಇವತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಒಂದು ಕಿಲೋಮೀಟರ್ ರಸ್ತೆ ನಿರ್ಮಾಣವಾಗಿಲ್ಲ. ರಸ್ತೆಗಳಲ್ಲಿ […]

(Udupi) ಉಡುಪಿ: ಆರೆಸ್ಸೆಸ್ ವಿರುದ್ಧ ಇದ್ದ ಇಂದಿರಾ ಗಾಂಧಿ ಮತ್ತು ನೆಹರೂ ಅವರಿಗೇ ಹೆದರಿರಲಿಲ್ಲ,  ಮಂಡಿಯೂರಲಿಲ್ಲ, ಇನ್ನು ಪ್ರಿಯಾಂಕ ಖರ್ಗೆಗೆ ಹೆದರುತ್ತೇವೆಯೇ? ಎಂದು  ಕಾರ್ಕಳ ಶಾಸಕ ಸುನಿಲ್ ಪ್ರಶ್ನೆ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸುನಿಲ್ ಕುಮಾರ್, ಇವತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಒಂದು ಕಿಲೋಮೀಟರ್ ರಸ್ತೆ ನಿರ್ಮಾಣವಾಗಿಲ್ಲ. ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇವನ್ನೆಲ್ಲ ಮರೆಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ವಿಚಾರವನ್ನು ಎಳೆದು ತಂದಿದ್ದಾರೆ ಎಂದಿದ್ದಾರೆ ಸುನೀಲ್‌ ಕುಮಾರ್.

‌     ಪ್ರಿಯಾಂಕ ಖರ್ಗೆಗೆ  ನಾಲಾಯಕ್ ಸಚಿವ. ಆರ್ ಎಸ್ ಎಸ್ ರಾಷ್ಟ್ರ ನಿರ್ಮಾಣ ಮಾಡಿದೆ. ಶಿಸ್ತಿಗೆ ಇನ್ನೊಂದು ಹೆಸರು ಆರೆಸ್ಸೆಸ್. ಈ ವಿಷಯ ಗೊತ್ತಿಲ್ಲದ ಅಪ್ರಭುದ್ಧ ರಾಜಕಾರಣಿ ಪ್ರಿಯಾಂಕ್ ಖರ್ಗೆ. ಅವರು ತಮ್ಮ ಇಲಾಖೆಯಲ್ಲಿ ಏನಾದರೂ ಜನರಿಗೆ ಅನುಕೂಲವಾಗುವ ಕೆಲಸ ಮಾಡುವುದನ್ನು ಬಿಟ್ಟು ಆರ್ ಎಸ್ ಎಸ್ ಅನ್ನು ಎಳೆದು ತಂದಿದ್ದಾರೆ. ಮೊದಲು ಅವರು ಅವರ ಇಲಾಖೆಯ ಬಗ್ಗೆ ಗಮನ ಹರಿಸಲಿ ಎಂದೂ ಸುನಿಲ್ ಕುಮಾರ್ ಹೇಳಿದ್ದಾರೆ. 

Leave a comment

Your email address will not be published. Required fields are marked *

eMedia Kannada  @2025. All Rights Reserved.