• Home  
  • ಕಾಪು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿ ಸಮುದ್ರ ಪಾಲು: ಸ್ಥಳೀಯರಿಂದ 7 ಮೀನುಗಾರರ ರಕ್ಷಣೆ (Kaup: Fishing boat capsizes in sea; 7 fishermen rescued by locals)
- PROBLEMS - ಕಾಪು ತಾಲೂಕು ಆಡಳಿತ

ಕಾಪು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿ ಸಮುದ್ರ ಪಾಲು: ಸ್ಥಳೀಯರಿಂದ 7 ಮೀನುಗಾರರ ರಕ್ಷಣೆ (Kaup: Fishing boat capsizes in sea; 7 fishermen rescued by locals)

Share: ಕಾಪು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿ ಸಮುದ್ರ ಪಾಲು: ಸ್ಥಳೀಯರಿಂದ 7 ಮೀನುಗಾರರ ರಕ್ಷಣೆ  (Kaup) ಕಾಪು : ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯೊಂದು ಕಾಪು ಲೈಟ್ ಹೌಸ್ ಬಳಿ ಸಮುದ್ರ ಪಾಲಾಗಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಎಲ್ಲರೂ ಅಪಾಯದಿಂದ ಪಾರಾದ ಘಟನೆ ಸೋಮವಾರ ಸಂಭವಿಸಿದೆ.  ಆಂದ್ರ ಮೂಲದ ಮೀನುಗಾರರನ್ನು ಹೊಂದಿದ್ದ ಟ್ರಾಲ್ ಬೋಟ್ ಕಾಪು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು.   ದೋಣಿಯಲ್ಲಿದ್ದ 7 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿ […]

 (Kaup) ಕಾಪು : ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯೊಂದು ಕಾಪು ಲೈಟ್ ಹೌಸ್ ಬಳಿ ಸಮುದ್ರ ಪಾಲಾಗಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಎಲ್ಲರೂ ಅಪಾಯದಿಂದ ಪಾರಾದ ಘಟನೆ ಸೋಮವಾರ ಸಂಭವಿಸಿದೆ.

 ಆಂದ್ರ ಮೂಲದ ಮೀನುಗಾರರನ್ನು ಹೊಂದಿದ್ದ ಟ್ರಾಲ್ ಬೋಟ್ ಕಾಪು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು.   ದೋಣಿಯಲ್ಲಿದ್ದ 7 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿ ಅವರನ್ನು ಕಳುಹಿಸಿ ಕೊಡಲಾಗಿದೆ. ‌

 ಸ್ಥಳೀಯರಾದ ಧೀರೇಶ್, ಶಿವಾಜಿ, ಬಾಲಕೃಷ್ಣ, ದಯೋದರ ಪುತ್ರನ್, ಕೃಷ್ಣರಾಜ್, ಸಂದೀಪ್, ಲೈಫ್ ಗಾರ್ಡ್ ಚಂದ್ರಶೇಖರ್ ಮೆಂಡನ್ ಮತ್ತು ತಂಡ ಹಾಗೂ  ಕೋಸ್ಟಲ್ ಗಾರ್ಡ್ ‌ಗಳಾದ ಪ್ರಶಾಂತ್, ವಿನೋದ್‌ರವರು    ಮೀನುಗಾರರನ್ನು ರಕ್ಷಿಸಿ, ದೋಣಿಯನ್ನು ದಡಕ್ಕೆ ತಲುಪಿಸಲುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಪು ತಹಶೀಲ್ದಾರ್‌ಘಟನಾ ಸ್ಥಳಕ್ಕೆ ಭೇಟಿ : ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ ಜೀವ ಉಳಿಸಿಕೊಂಡು ನಡುಗುತ್ತಾ ನಿಂತಿದ್ದ ಎಲ್ಲಾ ಮೀನುಗಾರರನ್ನು ವಿಶ್ವಾಸದಿಂದ ಮಾತನಾಡಿಸಿ ಸಾಂತ್ವನ ಹೇಳಿದರು.

 ಅವರ ಜೀವನದ ಹೋರಾಟ ಕೇಳಿ ಸಹಾನುಭೂತಿ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು. ತಹಶಿಲ್ದಾರ್ ಪ್ರತಿಭಾ ರವರು ಸ್ವತಃ ಬಂದು ಸಾಂತ್ವನ ಹೇಳಿದ್ದರಿಂದ ಆ ಮೀನುಗಾರರ ಮುಖದಲ್ಲಿ ನಗು ಮೂಡಿದೆ.

ತಹಶೀಲ್ದಾರ್‌ರವರೊಂದಿಗೆ ಕಂದಾಯ ಅಧಿಕಾರಿ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಶ್ರೀನಿವಾಸ್, ಗ್ರಾಮ ಸಹಾಯಕರಾದ ದಿಲೀಪ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.