ಕಾಪು: ಮೂರು ಮಾರಿಗುಡಿಗಳಲ್ಲಿ ಆಟಿ ಮಾರಿಪೂಜೆ ಸಂಪನ್ನ
ಕಾಪುವಿನ ಹಳೆಮಾರಿಯಮ್ಮ, ಹೊಸ ಮಾರಿಯಮ್ಮ ಹಾಗೂ ಕಲ್ಯ ಮಾರಿಯಮ್ಮ ಗುಡಿ
(Kaup) ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿಯಮ್ಮ ಗುಡಿ, ಹೊಸ ಮಾರಿಯಮ್ಮ ಗುಡಿ, ಹಾಗೂ ಕಲ್ಯ ಮಾರಿಯಮ್ಮ ಗುಡಿಗಳಲ್ಲಿಏಕಕಾಲದಲ್ಲಿ ತುಳುವರ ಆಟಿ ತಿಂಗಳ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.
ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ಮಾರಿ ಪೂಜೆ ನಡೆಯುತ್ತದೆ.
ಸುಗ್ಗಿ ಹಾಗೂ ಆಷಾಡ ತಿಂಗಳ ಮಾರಿ ಪೂಜೆಯಲ್ಲಿಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿ ಗುಡಿಗಳಿಗೆ ಆಗಮಿಸುತ್ತಿದ್ದು, ಜಾರ್ದೆಮಾರಿ ಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ.
ಪ್ರತಿ ಮಾರಿ ಪೂಜೆಗಳಲ್ಲಿ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದೂ ಇಲ್ಲಿಯ ವಿಶೇಷಗಳಲ್ಲೊಂದು.

