ಕಾಪು ಶಾಸಕರಿಂದ ನೂತನ ತಹಶಿಲ್ದಾರ್ ಅನಂತ ಶಂಕರ ಬಿ. ಅವರಿಗೆ ಅಭಿನಂದನೆ
ಕಾಪು ಶಾಸಕರ ಕಛೇರಿಯಲ್ಲಿ ನಡೆದ ಕಾರ್ಯಕ್ರಮ
(Kaup) ಕಾಪು: ಕಾಪು ತಾಲೂಕು ಕಛೇರಿಯಲ್ಲಿ ನೂತನ ತಹಶಿಲ್ದಾರ್ ಆಗಿ ಅಧಿಕಾರಿ ಸ್ವೀಕರಿಸಿದ ಅನಂತ ಶಂಕರ ಬಿ. ಅವರನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತಮ್ಮ ಕಛೇರಿಯಲ್ಲಿ ಅಭಿನಂದನೆ ಸಲ್ಲಿಸಿದರು.
ಕೆಲ ತಿಂಗಳ ಕಾಲ ಕಾಪು ತಾಲೂಕು ಕಛೇರಿಯಲ್ಲಿ ಸೇವೆ ಸಲ್ಲಿಸಿದ ಪ್ರಭಾರ ತಹಶಿಲ್ದಾರ್ ಪ್ರದೀಪ್ ಅವರನ್ನು ಅಭಿನಂದಿಸಿದ ಶಾಸಕರು, ಕೆಲವೇ ತಿಂಗಳ ಪ್ರಾಮಾಣಿಕ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿದರು.
ಈ ಸಂದರ್ಭ ಕಾಪು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಜೊತೆಗಿದ್ದರು.

