• Home  
  • ಕಾಪು ಶಾಸಕ  ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಕಟಪಾಡಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ಸವಲತ್ತು ವಿತರಣೆ
- ಪ್ರಚಲಿತ - ರಾಜಕೀಯ

ಕಾಪು ಶಾಸಕ  ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಕಟಪಾಡಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ಸವಲತ್ತು ವಿತರಣೆ

Share: ಕಾಪು ಶಾಸಕ ಗುರ್ಮೆ ಸುರೇಶ್ ಯವರು ಕಟಪಾಡಿ ಗ್ರಾಮ ಪಂಚಾಯತಿಯ ಅಬ್ಬಕ್ಕ ಹೆಗ್ಗಡ್ತಿ ಸಭಾ ಭವನದಲ್ಲಿ ಇಂದು   ಸಾರ್ವಜನಿಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಸಭೆಯಲ್ಲಿ ಶಾಸಕರು ಕೇರಾ ಸುರಕ್ಷಾ ವಿಮಾ ಪತ್ರ,   ಸಾಮಾಜಿಕ ಭದ್ರತಾ ಸೌಲಭ್ಯಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಆದೇಶ ಪತ್ರವನ್ನು ವಿತರಿಸಿ ಸಾರ್ವಜನಿಕರಿಂದ  ಅಹವಾಲುಗಳನ್ನು ಸ್ವೀಕರಿಸಿದರು.  ಕಾಪು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಕಟಪಾಡಿ ಗ್ರಾಮ ಪಂಚಾಯತ್ ವತಿಯಿಂದ  ಅಭಿನಂದನೆ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ […]

ಕಾಪು ಶಾಸಕ ಗುರ್ಮೆ ಸುರೇಶ್ ಯವರು ಕಟಪಾಡಿ ಗ್ರಾಮ ಪಂಚಾಯತಿಯ ಅಬ್ಬಕ್ಕ ಹೆಗ್ಗಡ್ತಿ ಸಭಾ ಭವನದಲ್ಲಿ ಇಂದು   ಸಾರ್ವಜನಿಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.

ಸಭೆಯಲ್ಲಿ ಶಾಸಕರು ಕೇರಾ ಸುರಕ್ಷಾ ವಿಮಾ ಪತ್ರ,   ಸಾಮಾಜಿಕ ಭದ್ರತಾ ಸೌಲಭ್ಯಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಆದೇಶ ಪತ್ರವನ್ನು ವಿತರಿಸಿ ಸಾರ್ವಜನಿಕರಿಂದ  ಅಹವಾಲುಗಳನ್ನು ಸ್ವೀಕರಿಸಿದರು.

 ಕಾಪು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಕಟಪಾಡಿ ಗ್ರಾಮ ಪಂಚಾಯತ್ ವತಿಯಿಂದ  ಅಭಿನಂದನೆ ಸಲ್ಲಿಸಲಾಯಿತು.

  ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್ ಆಚಾರ್ಯ, ಉಪಾಧ್ಯಕ್ಷ  ಅಬುಬಕ್ಕರ್, ಮುರ್ತೇದಾರರ ಸಂಘದ ಅಧ್ಯಕ್ಷರಾದ ಸದಾನಂದ,   ಗೀತಾಂಜಲಿ ಸುವರ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಮತಾ ಶೆಟ್ಟಿ,  ಕಟಪಾಡಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.