• Home  
  • ಕಾಪು ಶ್ರೀ ಹೊಸ ಮಾರಿಗುಡಿ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ
- ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ

Share: ಕಾಪು ಶ್ರೀ ಹೊಸ ಮಾರಿಗುಡಿ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಸಂಪೂರ್ಣ ಇಳಕಲ್ ಕೆಂಪು ಶಿಲೆಯೊಂದಿಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ಗರ್ಭಗುಡಿ ಮತ್ತು ಸಂಪೂರ್ಣ ಮಾರಿಗುಡಿಯ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ ಪೂಜೆಯು ಸೋಮವಾರ ದೇಗುಲದ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು. […]

ಕಾಪು ಶ್ರೀ ಹೊಸ ಮಾರಿಗುಡಿ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ

(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಸಂಪೂರ್ಣ ಇಳಕಲ್ ಕೆಂಪು ಶಿಲೆಯೊಂದಿಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ಗರ್ಭಗುಡಿ ಮತ್ತು ಸಂಪೂರ್ಣ ಮಾರಿಗುಡಿಯ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ ಪೂಜೆಯು ಸೋಮವಾರ ದೇಗುಲದ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಹೊಸ ಮಾರಿಗುಡಿ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿರುವ ಶಿಲ್ಪಿಗಳು ಮಾರಿಗುಡಿಯ ಮಹಾದ್ವಾರ, ನಾಲ್ಕು ಮಹಾಸ್ಥಂಭ, ಮರದ ಕೆತ್ತನೆಯ ಮೇಲ್ಛಾವಣಿಯ ಕರ್ಣ ಮುಚ್ಚಿಗೆ, ಸುತ್ತು ಪೌಳಿಯ ಶಿಲಾಸ್ಥಂಭಗಳ ಸಹಿತವಾಗಿ ನಾಲ್ಕು ಲಕ್ಷ ರೂ. ಗಳಿಂದ ಎರಡು ಕೋಟಿ ರೂಪಾಯಿವರೆಗಿನ 86 ಶಿಲಾಸ್ಥಂಬಗಳನ್ನು ದಾನಿಗಳಿಗೆ ಹಸ್ತಾಂತರಿಸಿದರು. ದಾನಿಗಳು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

 ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾDiಕಾರಿ ಕೆ. ರವಿಕಿರಣ್, ಮುಂಬಯಿ ಗೌರವಾಧ್ಯಕ್ಷ ಎಂ. ಸುಧಾಕರ್ ಹೆಗ್ಡೆ ಮುಂಬ, ಸಮಿತಿ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ್ ಶೆಟ್ಟಿ ಕಾಪು, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಮಹಾದ್ವಾರದ ದಾನಿ ಕೆ. ಎಂ. ಶೆಟ್ಟಿ ಮುಂಬ, ಮಹಾಸ್ತಂಭದ ದಾನಿ ಪ್ರಭಾಕರ ಜೆ. ಶೆಟ್ಟಿ ಮಂಡಗದ್ದೆ ಹಾಗೂ ಶಿಲಾಸ್ತಂಭ ಸಮರ್ಪಿಸಿದ ದಾನಿಗಳು, ಅವರ ಕುಟುಂಬಸ್ಥರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.