• Home  
  • ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ (Contributed by Jamate Islami Hind, Kaup for self employment)
- social service

ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ (Contributed by Jamate Islami Hind, Kaup for self employment)

Share: ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ (Kaup)  ಕಾಪು : ಅನಾರೋಗ್ಯದ ಸಮಯದಲ್ಲಿ ಸೇವಿಸಿದ ಔಷಧಿಯ ದುಷ್ಪರಿಣಾಮದ ಕಾರಣ ದೇಹದ ಪಾರ್ಶ್ವ ರೋಗಕ್ಕೆ ತುತ್ತಾಗಿ  ಸೊಂಟದ ಶಕ್ತಿ ಕಳೆದುಕೊಂಡ ಹೆಚ್ಚಿನ ಶ್ರಮದ ಕೆಲಸ ಮಾಡಲು ಅಸಮರ್ಥರಾದ ಯುವಕನೊರ್ವನಿಗೆ ಕಾಪು ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ನಲ್ವತೈದು ಸಾವಿರ ರೂಪಾಯಿ ಬೆಲೆಯ ಒಂದು ಗೂಡಂಗಡಿಯನ್ನು  ಒದಗಿಸಿ ಕೊಟ್ಟು, ಸ್ವ ಉದ್ಯೋಗ ಮಾಡಲು  ಬೆಳಪು ಗ್ರಾಮ ಪಂಚಾಂಯತ್ ವ್ಯಾಪ್ತಿಯಲ್ಲಿ […]

ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ

(Kaup)  ಕಾಪು : ಅನಾರೋಗ್ಯದ ಸಮಯದಲ್ಲಿ ಸೇವಿಸಿದ ಔಷಧಿಯ ದುಷ್ಪರಿಣಾಮದ ಕಾರಣ ದೇಹದ ಪಾರ್ಶ್ವ ರೋಗಕ್ಕೆ ತುತ್ತಾಗಿ  ಸೊಂಟದ ಶಕ್ತಿ ಕಳೆದುಕೊಂಡ ಹೆಚ್ಚಿನ ಶ್ರಮದ ಕೆಲಸ ಮಾಡಲು ಅಸಮರ್ಥರಾದ ಯುವಕನೊರ್ವನಿಗೆ ಕಾಪು ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ನಲ್ವತೈದು ಸಾವಿರ ರೂಪಾಯಿ ಬೆಲೆಯ ಒಂದು ಗೂಡಂಗಡಿಯನ್ನು  ಒದಗಿಸಿ ಕೊಟ್ಟು, ಸ್ವ ಉದ್ಯೋಗ ಮಾಡಲು  ಬೆಳಪು ಗ್ರಾಮ ಪಂಚಾಂಯತ್ ವ್ಯಾಪ್ತಿಯಲ್ಲಿ ಅನುವು ಮಾಡಿ ಕೊಟ್ಟಿದೆ.

  ಉದ್ಯಮಿಯಾದ ಮುಸ್ತಾಕ್ ಇಬ್ರಾಹೀಮ್ ರವರು ಈ ಅಂಗಡಿಯನ್ನು ಉದ್ಘಾಟಿಸಿದರು.

 ಸಮಾಜ ಸೇವಕ ಜಹೀರ್ ಅಹಮದ್‌ರವರು, ಜಮಾ ಆತೆ ಇಸ್ಲಾಮೀ ಹಿಂದ್ ರವರು ಈ ಅಂಗಡಿಯ ಸಂಪೂರ್ಣ ಖರ್ಚನ್ನು ಭರಿಸಿ, ಯುವಕನಿಗೆ ಕೊಡುಗೆಯಾಗಿ ನೀಡಿದ್ದು, ಇದನ್ನು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಶುಭ ಹಾರೈಸಿದರು.

 ಬದರ್ ಜುಮ್ಮಾ ಮಸ್ಜಿದ್‌ನ ಖತೀಬ್ ರಶೀದ್ ಸಖಾಫಿ ಯವರು ದುವಾ ನೆರವೇರಿಸಿದರು.  

ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿಯವರು  ಅತಿಥಿಗಳನ್ನು ಸ್ವಾಗತಿಸಿ, ಜಮಾ ಅತ್,  ಸಮಾಜದಲ್ಲಿರುವ ಬಡ ಜನರನ್ನು ಗುರುತಿಸಿ, ಸ್ವಾವಲಂಬಿಯಾಗಿ ತಮ್ಮ ಬದುಕು ರೂಪಿಸಲು ಯೋಜನೆ ಹಾಕಿಕೊಂಡು ಅದರ ವ್ಯವಸ್ಥೆ ಮಾಡುತ್ತದೆ ಎಂದು ತಿಳಿಸುತ್ತಾ, ಕೊನೆಯಲ್ಲಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.